ಶಿವಮೊಗ್ಗದಲ್ಲಿ ರಾಘವೇಂದ್ರ ಸಿಎಂ ಆಗಿದ್ದಾರೆ : ಶಾಸಕ ಅಸಮಾಧಾನ

ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಮುಖ್ಯಮಂತ್ರಿಯಂತಾಗಿದ್ದಾರೆ.ಅವರು ಹೇಳಿದ್ದೆ ಫೈನಲ್ ಎನ್ನುವಂತಾಗಿದೆ ಎಂದು ಶಾಸಕರೋರ್ವರು ಅಸಮಾಧಾನ ಹೊರಹಾಕಿದ್ದಾರೆ. 

Congress MLA Sangameshwar Slams MP BY Raghavendra snr

ಭದ್ರಾವತಿ (ಮಾ.04):  ಭದ್ರಾವತಿಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯ ಇಟ್ಟಿದ್ದೆವು. ಬಹುಮಾನ ಕೊಡುವ ವೇಳೆ ಆರ್ ಎಸ್ ಎಸ್ ಕಿತಾಪತಿ ಮಾಡಿದೆ ಎಂದು ಶಾಸಕ ಸಂಗಮೇಶ್ ಹೇಳಿದರು.

ಧರ್ಮ,ಜಾತಿ ಮುಂದಿಟ್ಟು ಕಿತಾಪತಿ‌ ಮಾಡಿದ್ದಾರೆ. ಆಟದಲ್ಲಿ ಧರ್ಮ,ಜಾತಿ ರಾಜಕೀಯ ತಂದಿದ್ದಾರೆ. ಕೋಮುಗಲಭೆ ಸೃಷ್ಠಿಗೆ ಮುಂದಾಗಿದ್ದರು. ನಾವು ಸಮಾಧಾನ ಮಾಡಿದ್ದೆವು. ಆದರೆ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ನನ್ನ ಮೇಲೆ ಮರ್ಡರ್ ಅಟೆಮ್ಟ್ ಕೇಸ್ ದಾಖಲಿಸಿದ್ದಾರೆ. 
 
ಸಿಎಂ ಕುಟುಂಬದವರು ಕೇಸ್ ಹಾಕಿಸಿದ್ದಾರೆ. ಅದಕ್ಕೆ ಕೋಮುಗಲಭೆ ಹಾಕೋಕೆ ಹೊರಟಿದ್ದಾರೆ. ಒಬ್ಬ ಶಾಸಕನ ಮೇಲೂ ಕೇಸ್ ಹಾಕಿದ್ದಾರೆ. ಅವರ ವಿರುದ್ಧ ದೂರು ಕೊಟ್ಟರೆ ಅರೆಸ್ಟ್ ಮಾಡಿಲ್ಲ. ತಾಕತ್ತಿದ್ದರೆ ಈಶ್ವರಪ್ಪ ಅವರು ನನ್ನ ಜೈಲಿಗೆ ಕಳಿಸಲಿ  ಎಂದು ಸಂಗಮೇಶ್ ಸವಾಲು ಹಾಕಿದ್ದಾರೆ. 

ಮುನಿಸಿಕೊಂಡಿದ್ದ ಶಾಸಕ ಕುಮಾರ ಬಂಗಾರಪ್ಪ ಸಂಧಾನ ಸಕ್ಸಸ್ ...

ಅವರಂತೆ ನಾನು ರಾಸಲೀಲೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ,ಅನ್ಯಾಯ ಮಾಡಿಲ್ಲ.  ನನ್ನ ಮೇಲೆ,ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು  ಸಿಎಂ ಕುಟುಂಬದ ವಿರುದ್ಧ ಶಾಸಕ ಸಂಗಮೇಶ್ ಆರೋಪ ಮಾಡಿದ್ದಾರೆ.
 
ರಾಘವೇಂದ್ರ ವಿರುದ್ಧ ವಾಗ್ದಾಳಿ :  ಶಿವಮೊಗ್ಗ ಜಿಲ್ಲೆಯಲ್ಲಿ ಸಂಸದ ರಾಘವೇಂದ್ರ ಹೇಳಿದ್ದೆ ಫೈನಲ್ ಎಂಬಂತಾಗಿದೆ. ಶಿವಮೊಗ್ಗ ಸಿಎಂ ರೀತಿಯಲ್ಲಿ ಬಿಎಸ್ ವೈ ಪುತ್ರ ರಾಘವೇಂದ್ರ ವರ್ತಿಸುತ್ತಿದ್ದಾರೆ.  ಸಂಸದರಾಗಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿ ಮಾಡಲಿ. ರಾಜ್ಯ ಸರ್ಕಾರದ ಫಂಡ್ ಗಳ ಮೇಲೆ ಕಣ್ಣು ಹಾಕುವುದು ಏಕೆ ಎಂದು ಸಂಗಮೇಶ್ ಪ್ರಶ್ನೆ ಮಾಡಿದ್ದಾರೆ.  ಬಿಎಸ್ ವೈ ಕುಟುಂಬದ ರಾಜಕಾರಣ ನೋಡಿ ಶಿವಮೊಗ್ಗ ಜಿಲ್ಲೆಯ ಶಾಸಕರೆಲ್ಲ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

Latest Videos
Follow Us:
Download App:
  • android
  • ios