ರಾಜ್ಯ ಬಿಜೆಪಿ ಈಗ ಒಡೆದ ಮನೆ: ಪ್ರಿಯಾಂಕ್‌ ಖರ್ಗೆ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಮ್ಮ ಖುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ| ಬಿಜೆಪಿಯಲ್ಲಿ ಕೆಲವರು ಸಚಿವರಾಗಲು ಪ್ರಯತ್ನಿಸುತ್ತಿದ್ದರೆ ಮತ್ತೆ ಕೆಲವರು ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ| ಮೂಲ ಹಾಗೂ ವಲಸಿಗರ ನಡುವೆ ಅಸಮಾಧನ ಬುಗಿಲೆದ್ದಿದೆ: ಖರ್ಗೆ| 

Congress MLA Priyank Kharge Talks Over BJP grg

ಕಲಬುರಗಿ(ಡಿ.03): ರಾಜ್ಯ ಬಿಜೆಪಿ ಈಗ ಒಡೆದ ಮನೆಯಂತಾಗಿದೆ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ. 

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಕೆಲವರು ಸಚಿವರಾಗಲು ಪ್ರಯತ್ನಿಸುತ್ತಿದ್ದರೆ ಮತ್ತೆ ಕೆಲವರು ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ. ಮೂಲ ಹಾಗೂ ವಲಸಿಗರ ನಡುವೆ ಅಸಮಾಧನ ಬುಗಿಲೆದ್ದಿದೆ ಎಂದರು. 

ಸಿಎಂ ಬದಲಾವಣೆ ವಿಚಾರ ಕೇವಲ ಗಾಳಿ ಮಾತು: ಡಿಸಿಎಂ ಸವದಿ

ಕೇವಲ ವಲಸಿಗರಿಂದ ಸರ್ಕಾರ ರಚನೆಯಾಗಿಲ್ಲ ಎಂದು ಕೆಲವರು ಹೇಳಿದರೆ ವಲಸಿಗರು ಇಲ್ಲದಿರುವಾಗ ತನ್ನ ಶಾಸಕರಿಂದಲೇ ಬಿಜೆಪಿ ಯಾಕೆ ಸರ್ಕಾರ ರಚಿಸಲಿಲ್ಲ ವಲಸಿಗರು ಹೇಳುತ್ತಿದ್ದಾರೆ. ಇದರಿಂದಾಗಿ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಯಾರಿಗೂ ಅರ್ಥವಾಗುತ್ತಿಲ್ಲ ಎಂದರು. ಬರೀ ಘೋಷಣೆ, ಸುಳ್ಳು ಭರವಸೆ ನೀಡುತ್ತಾ ಜನರ ಮೂಗಿಗೆ ತುಪ್ಪ ಸವರುತ್ತಾ ಸಾಗಿರುವ ಬಿಜೆಪಿ ನಾಯಕರ ಆಟ ಬಹಳ ದಿನ ನಡೆಯುವುದಿಲ್ಲ. ನಿರುದ್ಯೋಗ ಹೋಗಲಾಡಿಸಲು ಸಮರ್ಪಕ ಯೋಜನೆಗಳಿಲ್ಲ. ಕೊರೋನಾ ವಿರುದ್ಧ ದಿಟ್ಟ ಹಾಗೂ ಅಗತ್ಯ ಕ್ರಮಗಳಿಲ್ಲ ಎಂದು ಶಾಸಕರು ಟೀಕಿಸಿದರು.
 

Latest Videos
Follow Us:
Download App:
  • android
  • ios