ಬಿಜೆಪಿ ಮಾಜಿ ಶಾಸಕನ ನೇತೃತ್ವದಲ್ಲಿ ನಡೆದ ಅವೈಜ್ಞಾನಿಕ ಡಿವೈಡರ್ ತೆರವಿಗೆ ಕಾಂಗ್ರೆಸ್ ಶಾಸಕ ಸೂಚನೆ
ಅವೈಜ್ಞಾನಿಕ ಡಿವೈಡರ್ ಕುರಿತು ಖುದ್ದು ಪರಿಶೀಲನೆ ನಡೆಸಿದ ಶಾಸಕ ಕೆ.ಸಿ ವಿರೇಂದ್ರ. ಶೀಘ್ರದಲ್ಲಿಯೇ ಅವೈಜ್ಞಾನಿಕ ಡಿವೈಡರ್ ತೆರವು ಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.25): ಚುನಾವಣೆ ವೇಳೆ ಅಖಾಡದಲ್ಲಿರುವ ಅಭ್ಯರ್ಥಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸೋದು ಕಾಮನ್. ಆದ್ರೆ ಚುನಾವಣೆ ಮುಗಿದ ಬಳಿಕವೂ ಚಿತ್ರದುರ್ಗದ ಹಾಲಿ ಹಾಗೂ ಮಾಜಿ ಶಾಸಕರ ರಾಜಕೀಯ ಜಿದ್ದಾಜಿದ್ದಿಗೆ ಹತ್ತಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೊ ಡಿವೈಡರ್ ಅಸ್ತ್ರವಾಗಿದೆ.
ಐತಿಹಾಸಿಕ ಹಿನ್ನೆಲೆಯಳ್ಳ ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಮಾಜಿ ಶಾಸಕ ತಿಪ್ಪಾರೆಡ್ಡಿ ನೇತೃತ್ವದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗು ಡಿವೈಡರ್ ಕಾಮಗಾರಿ ನಡೆದಿದೆ. ಈ ಕಾಮಗಾರಿಯನ್ನು ಪಿಡಬ್ಲುಡಿ ಅಧಿಕಾರಿಗಳು ಮುಗಿಸಿದ್ದಾರೆ. ಆದ್ರೆ ರಸ್ತೆ ಅಗಲೀಕರಣವನ್ನು ಯೋಜನಾ ಬದ್ದವಾಗಿ ನಡೆಸದೇ, ಅವೈಜ್ಞಾನಿಕ ಡಿವೈಡರ್ ನಿರ್ಮಾಣ ಮಾಡಿದ್ದಾರೆಂಬ ವಿಚಾರ ಎಲ್ಲೆಡೆ ಬಾರಿ ಚರ್ಚೆ ಶುರುವಾಗಿತ್ತು.
ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ!
ಹೀಗಾಗಿ 2023 ರ ಚುನಾವಣೆ ವೇಳೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಹಾಲಿ ಕೈ ಶಾಸಕ ವೀರೇಂದ್ರ ಪಪ್ಪಿ ಅವರು ತಾವು ಗೆದ್ದರೆ ಡಿವೈಡರ್ ತೆರವುಗೊಳಿಸುವುದಾಗಿ ಭರವಸೆ ನೀಡಿದ್ರು. ಹೀಗಾಗಿ ಇಂದು ಶಾಸಕ ಕೆ.ಸಿ.ವಿರೇಂದ್ರ, ನಗರಸಭೆ, ಪಿಡಬ್ಲೂಡಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಗರ ಸಂಚಾರ ನಡೆಸಿದ್ದು,ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರೊ ಡಿವೈಡರ್ ಪರಿಶೀಲನೆ ನಡೆಸಿದ್ರು. ಶೀಘ್ರದಲ್ಲೇ ಅವೈಜ್ಞಾನಿಕ ಡಿವೈಡರ್ ತೆರವು ಗೊಳಿಸುವುದಾಗಿ ಘೋಷಿಸಿದರು.
ಇನ್ನು ಈ ರಸ್ತೆ ಹಾಗೂ ಡಿವೈಡರ್‌ಗಳನ್ನು ಪಿಡಬ್ಲೂಡಿ ಇಲಾಖೆಯಿಂದ ನಿಯಮಾನುಸಾರ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳು ವರದಿ ನೀಡಿದ ಬಳಿಕವೂ ಎಸ್ಪಿ ಹಾಗೂ ನಗರಸಭೆ ಅಧಿಕಾರಿಗಳ ಜತೆ ಸಿಟಿ ರೌಂಡ್ಸ್ ನಡೆಸಿದ್ದು,ಈ ವೇಳೆ ಪಿಡಬ್ಲುಡಿ ಅಧಿಕಾರಿಗಳನ್ನು ಕೇಳಿದ್ರೆ ಅಕ್ರಮ ಹಾಗು ಅವೈಜ್ಞಾನಿಕ ಡಿವೈಡರ್ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದಾರೆ.
ವಿಜಯಪುರದಲ್ಲಿ ಮಳೆರಾಯನ ಆರ್ಭಟ: ಮನೆಯ ಛಾವಣಿ ಕುಸಿದು ವೃದ್ಧೆ ಸಾವು..!
ಒಟ್ಟಾರೆ ಮಾಜಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೊ ಅವೈಜ್ಞಾನಿಕ ಡಿವೈಡರ್ ತೆರವಿಗೆ ಶಾಸಕ ವೀರೇಂದ್ರ ಸೂಚಿಸಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಕಾಮಗಾರಿ ವೈಜ್ಞಾನಿಕವಾಗಿದೆ ಅಂತ ವರದಿ ನೀಡಿದ್ದು, ಡಿವೈಡರ್ ಫೈಟ್ ಈಗ ಡಿಸಿ ಅಂಗಳಕ್ಕೆ ಬಂದು ನಿಂತಿದೆ. ಹೀಗಾಗಿ ಈ ಫೈಟ್ ಹೇಗೆ ಅಂತ್ಯವಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.