ಪ್ರಕೃತಿ ವಿಕೋಪದಂತಹ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಸರಿಯಲ್ಲ ಇನ್ನೂ ಒಂದು ತಿಂಗಳ ಕಾಲ ಯಡಿಯೂರಪ್ಪ ಮುಂದುವರಿಯುವುದು ಸೂಕ್ತ  ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಅಭಿಪ್ರಾಯ

ಬೆಳಗಾವಿ (ಜು.25): ಪ್ರಕೃತಿ ವಿಕೋಪದಂತಹ ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಸರಿಯಲ್ಲ. ಇನ್ನೂ ಒಂದು ತಿಂಗಳ ಕಾಲ ಯಡಿಯೂರಪ್ಪ ಮುಂದುವರಿಯುವುದು ಸೂಕ್ತ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರ ಬದಲಾವಣೆ ಚರ್ಚೆ ನಡೆಯುತ್ತಿರುವುದು ದುರಂತ.

ಯಡಿಯೂರಪ್ಪ ನಂತರ ಮುಂದ್ಯಾರು? ಕೇಳಿಬರುತ್ತಿವೆ ಆರೇಳು ಹೆಸರು

ಪ್ರವಾಹ ಪರಿಸ್ಥಿತಿಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಸರಿಯಲ್ಲ ಎಂದರು. ನಾಯಕತ್ವ ಬದಲಾವಣೆ ವಿಚಾರ ಬಿಜೆಪಿಗೆ ಬಿಟ್ಟಿದ್ದು. 

ಆದರೆ ಹೊಸ ಮುಖ್ಯಮಂತ್ರಿ ಬಂದರೆ ಪರಿಹಾರ ಕಾರ್ಯಕೈಗೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಹಾಲಿ ಸಿಎಂ ಅವರನ್ನು ಒಂದು ತಿಂಗಳ ಕಾಲ ಮುಂದುವರಿಸುವುದು ಸೂಕ್ತ ಎಂದು ಹೇಳಿದರು.