ಸಾಮಾನ್ಯವಾಗಿ ನಾವು ಎಂಎಲ್‌ಎ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷವನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ ಇಲ್ಲೊಂದು ಊರಲ್ಲಿ ರಿಯಲ್ ಲೈಫ್‌ನಲ್ಲಿ ಎಂ‌ಎಲ್‌ಎ ವರ್ಸಸ್ ಸಿಪಿಐ ಆಗಿದೆ.‌ ಅಷ್ಟಕ್ಕೂ ಏನಿದು ಎಂಎಲ್‌ಎ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷ ಅಂತೀರಾ?

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಜು.17): ಸಾಮಾನ್ಯವಾಗಿ ನಾವು ಎಂಎಲ್‌ಎ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷವನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ ಇಲ್ಲೊಂದು ಊರಲ್ಲಿ ರಿಯಲ್ ಲೈಫ್‌ನಲ್ಲಿ ಎಂ‌ಎಲ್‌ಎ ವರ್ಸಸ್ ಸಿಪಿಐ ಆಗಿದೆ.‌ ಅಷ್ಟಕ್ಕೂ ಏನಿದು ಎಂಎಲ್‌ಎ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷ ಅಂತೀರಾ? ಹಾಗಾದರೆ ಈ ವರದಿ ನೋಡಿ.

ಯಾರಾರ ನಡುವೆ ಸಂಘರ್ಷ: ಅಷ್ಟಕ್ಕೂ ನಾವು ಈಗ ಹೇಳುತ್ತಿರುವುದು ಸಿನಿಮಾ ಕಥೆ ಅಲ್ಲ.‌ ಬದಲಾಗಿ ಪೊಲೀಸ್ ಢಾಣೆ ಆವರಣದಲ್ಲಿ ನಡೆದ ಗಲಾಟೆ ವಿಷಯವನ್ನ. ಅಷ್ಟಕ್ಕೂ ಈ ಗಲಾಟೆ ನಡೆದಿರುವುದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಕುಷ್ಟಗಿ ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಎನ್ನುವರ ನಡುವೆ.

ಎಲ್ಲಿ ಗಲಾಟೆ ನಡೆದಿರುವುದು: ಸಾಮಾನ್ಯವಾಗಿ ಪೊಲೀಸ್ ಠಾಣೆಯ ಆವರಣ ಅಂದರೆ ಸಾಕು ಅಲ್ಲೊಂದು ಭಯದ ವಾತಾವರಣ ಇದ್ದೇ ಇರುತ್ತದೆ. ಆದರೆ ಕುಷ್ಟಗಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಾತ್ರ ಇಂದು ಯಾವುದೇ ಭಯದ ವಾತಾರಣ ಇದ್ದಿಲ್ಲ.‌ಇದಕ್ಕೆಲ್ಲ ಕಾರಣ ಎಂಎಲ್ಎ ಬಯ್ಯಾಪೂರ ಹಾಗೂ ಸಿಪಿಐ ನಿಂಗಪ್ಪ ನಡುವಿನ ಗಲಾಟೆ. ಹೌದು! ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಕುಷ್ಟಗಿ ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಮಧ್ಯೆ ಗಲಾಟೆ ನಡೆದಿರುವುದು. ಯಾವುದೇ ಖಾಸಗಿ ಸ್ಥಳದಲ್ಲಿ ಅಲ್ಲ, ಬದಲಾಗಿ ಪೊಲೀಸ್ ಠಾಣೆಯ ಆವರಣದಲ್ಲಿಯೇ ಎನ್ನುವುದು ಇದೀಗ ಚರ್ಚೆಯ ವಿಷಯವಾಗಿದೆ. 

ಕೊಪ್ಪಳ: ಕಾಮುಕ ಶಿಕ್ಷಕನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್‌

ಯಾವ ಕಾರಣಕ್ಕಾಗಿ ಗಲಾಟೆ: 2017ರಲ್ಲಿ ಮರಳು ಗಣಿಗಾರಿಕೆ ವಿಚಾರವಾಗಿ ಗಂಗನಾಳ ಗ್ರಾಮದ ಶಾಸಕ ಅಮರೇಗೌಡ ಬಯ್ಯಾಪೂರ ಅವರ ಬೆಂಬಲಿಗನೊಬ್ಬ ಸಾಕ್ಷಿ ಹೇಳಿದ್ದ. ಈ ಕುರಿತು ಆತ ಸರಿಯಾಗಿ ಹಾಜರಾಗದ ಹಿನ್ನಲೆಯಲ್ಲಿ ಆತನ ವಿರುದ್ಧ ವಾರೆಂಟ್ ಜಾರಿಯಾಗಿತ್ತು.‌ಈ ಹಿನ್ನಲೆಯಲ್ಲಿ ಆತ ಕೋರ್ಟ್‌ಗೆ ಬಂದಿದ್ದ. ಈ ವೇಳೆಯಲ್ಲಿ ಪೊಲೀಸರು ಆತನ ಮೇಲೆ ದೌರ್ಜನ್ಯ ಎಸಗಿ ಠಾಣೆಗೆ ಕರೆತಂದಿದ್ದರಂತೆ.‌ ಇದರಿಂದ‌ ಆಕ್ರೋಶಗೊಂಡ ಅಮರೇಗೌಡ ಬಯ್ಯಾಪೂರ ತಮ್ಮ ನೂರಾರು ಬೆಂಬಲಿಗರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ದೌಡಾಯಿಸಿದರು. ಈ ವೇಳೆಯಲ್ಲಿ ಠಾಣೆಯ ಮುಂಭಾಗದಲ್ಲಿಯೇ ಕುಳಿತು ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಿಸಿದರು.

ಸಿಪಿಐ ಮೇಲೆ ಏರಿಹೋದ ಎಂಎಲ್ಎ ಬಯ್ಯಾಪೂರ: ತಮ್ಮ ಬೆಂಬಲಿಗನ್ನು ಠಾಣೆಗೆ ಕರೆತಂದ ಹಿನ್ನಲೆಯಲ್ಲಿ ಅಮರೇಗಾವಡ ಬಯ್ಯಾಪೂರ ಆಕ್ರೋಶಗೊಂಡು ಕೂಗಾಡಲು ಆರಂಭ ಮಾಡಿದರು.‌ ಪೊಲೀಸರು ವಿನಾಕಾರಣ ನಮ್ಮ‌ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿಗರ ಮೇಲೆ ನೀವು ವಿನಾಕಾರಣ ದೌರ್ಜನ್ಯ ಎಸಗುತ್ತಿದ್ದಿರಿ ಎಂದು ನೇರವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಮಾಡಿದರು.‌ ಈ ವೇಳೆ ಸಿಪಿಐ ನಿಂಗಪ್ಪ ಹಾಗೂ ಎಂಎಲ್ಎ ಬಯ್ಯಾಪೂರ ಮಧ್ಯೆ ಮಾತಿನ ಚಕಮಕಿ‌ ನಡೆಯಿತು.‌ ಒಂದು ಹಂತದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಸಿಪಿಐ ನಿಂಗಪ್ಪ‌ ಅವರ ಮೇಲೆ ಏರಿ ಹೋದರು.

ನನ್ನ‌ ಮೇಲೆ ಎಂಎಲ್ಎ ಹಲ್ಲೆಗೆ ಮುಂದಾಗಿದ್ದರು ಎಂದ‌ ಸಿಪಿಐ: ಎಂಎಲ್ಎ ಬಯ್ಯಾಪೂರ ಹಾಗೂ ಸಿಪಿಐ ನಿಂಗಪ್ಪ ಅವರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವಿನ ಗಲಾಟೆ ಒಂದು ಹಂತದಲ್ಲಿ ದೀರ್ಘಕ್ಕೆ ಹೋಯಿತು. ಈ ವೇಳೆ ಎರಡೂ ಕಡೆಯಿಂದ ಇಬ್ಬರನ್ನೂ ಸಮಾಧಾನ ಪಡಿಸಿದರು. ಇನ್ನು ಗಲಾಟೆ ವೇಳೆ ಶಾಸಕ ಅಮರೇಗೌಡ ಬಯ್ಯಾಪೂರ ಅವರು ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ಸಿಪಿಐ ನಿಂಗಪ್ಪ‌ ಹೇಳಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸಿಪಿಐ ನಿಂಗಪ್ಪ ಮೇಲೆ‌ ಜಾತಿ-ರಾಜಕಾರಣದ ಆರೋಪ: ಗಲಾಟೆ ನಡೆದ ಬಳಿಕ‌ ಶಾಸಕ ಅಮರೇಗೌಡ ಬಯ್ಯಾಪೂರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸಿಪಿಐ ನಿಂಗಪ್ಪ‌ ಅವರ ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ. ಕುಷ್ಟಗಿ ಸಿಪಿಐ ನಿಂಗಪ್ಪ ಕುರುಬ ಜಾತಿಗೆ ಸೇರಿದವರಾಗಿದ್ದು, ಇವರ ಸಮುದಾಯದ ದೊಡ್ಡನಗೌಡ ಪಾಟೀಲ್ ಮಾಜಿ ಶಾಸಕರಿದ್ದಾರೆ. ಈ ಹಿನ್ನಲೆಯಲ್ಲಿ ದೊಡ್ಡನಗೌಡ ಪಾಟೀಲ್ ಗೆ ಮುಂದಿನ ಚುನಾವಣೆಯಲ್ಲಿ ಅನಕೂಲವಾಗಲೆಂದು ಸಿಪಿಐ ನಿಂಗಪ್ಪ ಅವರಿಗೆ ಸಹಾಯ ಮಾಡುತ್ತಿದ್ದಾನೆ ಎಂದು ಪರೋಕ್ಷ‌ವಾಗಿ ಅಮರೇಗೌಡ ಬಯ್ಯಾಪೂರ ಹೇಳಿದ್ದಾರೆ. ಸಿಪಿಐ ನಿಂಗಪ್ಪ ಬಿಜೆಪಿ ಪರ ಕೆಲಸ ಮಾಡುತ್ತಿದ್ದು, ನಮ್ಮ ಕಾರ್ಯಕರ್ತರಿಗೆ ಸಿಪಿಐ ನಿಂಗಪ್ಪ ನಿತ್ಯ ಕಿರುಕುಳ ಕೊಡುತ್ತಿದ್ದು, ಸಿಪಿಐ ನಿಂಗಪ್ಪ ಪಕ್ಷಬೇಧ ಜೊತೆಗೆ ಜಾತಿ ಮಾಡ್ತೀದಾನೆ ಎಂದು ಅಮರೇಗೌಡ ಬಯ್ಯಾಪೂರ ಗಂಭೀರ ಆರೋಪ ಮಾಡಿದ್ದಾರೆ.

ಅಂಜನಾದ್ರಿ ಅಭಿವೃದ್ಧಿಗೆ ಶೀಘ್ರ ನೀಲನಕ್ಷೆ: ಸಚಿವ ಆನಂದ ಸಿಂಗ್‌

ಇನ್ನು‌ ನಮ್ಮ ಕಾರ್ಯಕರ್ತರಿಗೆ ಏನಾದರೂ ಆದ್ರೆ ಅದಕ್ಕೆ ಸಿಪಿಐ ನಿಂಗಪ್ಪ ಹೊಣೆ ಎಂದ ಅಮರೇಗೌಡ ಬಯ್ಯಾಪೂರ ನೇರವಾಗಿ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಕ್ಷುಲಕ ಕಾರಣಕ್ಕಾಗಿ ಇದೀಗ ಕೊಪ್ಪಳದ ಕುಷ್ಟಗಿಯಲ್ಲಿ ಎಂಎಲ್ಎ ವರ್ಸಸ್ ಸಿಪಿಐ ಆಗಿದ್ದು, ಮುಂದಿನ‌ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆಯೇ ಕಾದು ನೋಡಬೇಕಿದೆ.