ಚನ್ನರಾಯಪಟ್ಟಣ [ಫೆ.28] :  ಇಲ್ಲಿನ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಸ್ಥಾನದ ಆಯ್ಕೆ ವಿಚಾರದಲ್ಲಿ ಪಕ್ಷದ ನಿಯ ಮ ಉಲ್ಲಂಘಿಸಿ ಸಾಮಾನ್ಯ ಕ್ಷೇತ್ರಕ್ಕೆ ಚುನಾ ವಣೆಗೆ ನಿಂತಿರುವ ಎಪಿಎಂಸಿ ನಿರ್ದೇಶಕ ಎಂ.ಶಂಕರ್ ನಡೆ ಸರಿಯಲ್ಲ, ಪಕ್ಷದ ತೀರ್ಮಾನದಂತೆ ಬೆಂಬಲಿತ ಅಭ್ಯರ್ಥಿ ಕೇಶವ(ಕಿರಣ್) ಅವರನ್ನು ಬೆಂಬಲಿಸುವಂತೆ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ತಿಳಿಸಿದೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಪಿಎಲ್‌ಡಿ ಬ್ಯಾಂಕ್ 23 ಕೋಟಿ ರು. ಸಾಲದ ಹೊರೆಯ ಲ್ಲಿದ್ದು, ಮರುಪಾವತಿ ಕುಂಠಿತವಾಗಿದೆ. ಇಂತಹ ಸನ್ನಿವೇಶದಲ್ಲಿ ಚುನಾವಣೆ ಅರ್ಥಿ ಕ ಹೊರೆಯಾಗುವುದು ಬೇಡವೆಂದು ನಿರ್ಧರಿಸಿ ಜೆಡಿಎಸ್‌ನೊಂದಿಗೆ ಚರ್ಚಿಸಿ ಮಾಡಿಕೊಂಡ ಒಪ್ಪಂದದಂತೆ ಕಾಂಗ್ರೆಸ್‌ಗೆ 9, ಜೆಡಿಎಸ್‌ಗೆ 5 ನಿರ್ದೇಶಕ ಸ್ಥಾನಗಳನ್ನು ಬಿಟ್ಟುಕೊಡಲಾಗಿತ್ತು ಎಂದರು. 

ಆ ತೀರ್ಮಾನದಂತೆ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಹಿರೀಸಾವೆಯ ಕೇಶವ (ಕಿರಣ್) ಅವರನ್ನು ಆಯ್ಕೆ ಮಾಡ ಲಾಗಿತು. ಇದಕ್ಕೆ ಎಲ್ಲರೂ ಸಮ್ಮತಿಸಿದ್ದರೂ ಅಂತಿಮ ಕ್ಷಣದಲ್ಲಿ ಎಪಿಎಂಸಿ ನಿರ್ದೇಶಕ ಎಂ.ಶಂಕರ್ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ.

ಎಂ.ಶಂಕರ್ ಈಗಲಾದರೂ ತಮ್ಮ ನಿಲುವು ಬದಲಾಯಿಸಿ ಕಣದಿಂದ ನಿವೃತ್ತಿ ಘೋಷಿಸಿ ಪಕ್ಷ ಸಂಘಟನೆಯಲ್ಲಿ ತೊಡಗ ಬೇಕು. ಪಕ್ಷ ಅವರನ್ನೂ ಈಗಾಗಲೇ ಗುರ್ತಿಸಿದೆ. ಮುಂದೆಯೂ ಅವಕಾಶಗಳು ಇರುವಾಗ ದುಡುಕಿನ ನಿರ್ಧಾರ ಸರಿಯಲ್ಲ ಎಂದರು.

ಚಿತ್ರಗಳು: ರಾಜಕೀಯ ಬದ್ಧವೈರಿಗಳ ಸಮಾಗಮ, ಸಿದ್ದು ಮಾತಿಗೆ BSY ಭಾವುಕ...

ಬ್ಯಾಂಕಿನ 14 ನಿರ್ದೇಶಕರ ಸ್ಥಾನಗಳ ಪೈಕಿ ಸಾಲಗಾರರ ಕ್ಷೇತ್ರಗಳಲ್ಲಿ 13 ಸ್ಥಾನ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ 1 ಸ್ಥಾನವಿದ್ದು, ಇದಕ್ಕೆ ಕಾಂಗ್ರೆಸ್ ಬೆಂಬಲಿತ ಹಾಗೂ ಬಂಡಾಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಬ್ಬರು ಕಣದಲ್ಲಿದ್ದಾರೆ. 483 ಮಂದಿ ಮತದಾರರಿರುವುದಾಗಿ ತಿಳಿಸಿದ ರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ. ರಾಮಚಂದ್ರ ಮಾತನಾಡಿ, ಎಂ.ಶಂಕರ್ ಅವರನ್ನು ಪಕ್ಷ ಗುರ್ತಿಸಿ ಈಗಾಗಲೇ ನಾಲ್ಕು ಬಾರಿ ಪಕ್ಷದ ಬಿ.ಫಾರಂ ನೀಡಿದೆ. 

ಅವರು ಎಪಿಎಂಸಿ ನಿರ್ದೇಶಕರಾಗಿ, ಅವರ ಪತ್ನಿ ಜಿಪಂ ಸದಸ್ಯರಾಗಿದ್ದಾರೆ. ಆದರೂ ಅಧಿಕಾರ ಬಯಸುವುದು ತಪ್ಪು, ಇದು ತಾಲೂಕಿನ ಎಲ್ಲ ಕಾಂಗ್ರೆಸ್ ನಾಯಕರು ಸೇರಿ ನಿರ್ಧರಿಸಿದ ಅಭ್ಯರ್ಥಿಯ ವಿರುದ್ಧ ಚುನಾವಣೆ ನಿಲ್ಲುವುದು ಸರಿಯಲ್ಲ. ಪಕ್ಷದ ತೀರ್ಮಾನ ಧಿಕ್ಕರಿಸಿ ಚುನಾವಣೆ ಕಣದಲ್ಲಿರುವ ಅವರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್  ಸಮಿತಿಯಿಂದ ನೋಟಿಸ್ ನೀಡಲಾಗಿದೆ ಎಂದರು.