ತಾಂಡವಪುರ (ಅ.05): ನಂಜನಗೂಡು ತಾ.ಪಂ ಉಪಾಧ್ಯಕ್ಷರಾಗಿ ಹಾಗೂ ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿದ್ದಂತಹ ಹೆಜ್ಜಿಗೆ ಆರ್‌. ಗೋವಿಂದರಾಜನ್‌ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಹೆಜ್ಜಿಗೆ ಗ್ರಾಮದ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳುವ ಮೂಲಕ ಗೋವಿಂದರಾಜು ಅವರು ಒಬ್ಬ ಧೀಮಂತ, ರಾಜಕೀಯ ಪಟುವಾಗಿದ್ದರು, ಪಕ್ಷಕ್ಕೆ ನಿಷ್ಟರಾಗಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದರು, ಅದೇ ರೀತಿ ಮತ್ತೊಬ್ಬ ಮುಖಂಡರಾದ ಟಿ.ಕೆ. ಮಾಲೇಗೌಡರವರ ಅಗಲಿಕೆಯಿಂದಲೂ ಸಹ ಪಕ್ಷಕ್ಕೆ ಅಪಾರ ನಷ್ಟವುಂಟಾಗಿದೆ, ಇವರಿಬ್ಬರೂ ಒಟ್ಟಿಗೆ ಸೇರಿ ಪಕ್ಷವನ್ನು ಸಂಘಟಿಸುವ ಮೂಲಕ ತಾಲೂಕಿನಲ್ಲಿ ಕಾಂಗ್ರೆಸ್‌ ಬಲಗೊಳ್ಳಲು ಹೆಚ್ಚಿನ ಶ್ರಮ ವಹಿಸದಂತಹ ನಾಯಕರು ಎಂದರು.

ರಾತ್ರೋ ರಾತ್ರಿ RR ನಗರದಲ್ಲಿ ಡಿಕೆ ಬ್ರದರ್ಸ್: ಅಚ್ಚರಿ ಅಭ್ಯರ್ಥಿ ಮನೆಗೆ ಭೇಟಿ...!

ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ. ಬಸವರಾಜು ಮೈಸೂರು ಜಿಲ್ಲಾ ಹಿಂದುಳಿದ ವರ್ಗದ ಕಾಂಗ್ರೆಸ್‌ ಅಧ್ಯಕ್ಷ ಕೆ. ಮಾರುತಿ, ತಗಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾಲೂಕು ಕುರುಬವರ ಸಂಘದ ಅಧ್ಯಕ್ಷ ಕೆಂಪಣ್ಣ, ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಇಂಧನಬಾಬು, ಬಿ.ಪಿ. ಮಹದೇವು, ಯೋಗೇಶ್‌, ರವಿ ಇದ್ದರು.