ತುಮಕೂರು (ಸೆ.06): ಜಿ.ಎಸ್‌.ಟಿ ಪಾಲು ಸೇರಿದಂತೆ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೂ ಅಡಳಿತ ಪಕ್ಷದ ರಾಜ್ಯದ 25 ಜನ ಸಂಸದರು ಮೌನಕ್ಕೆ ಶರಣಾಗಿರುವುದು ಈ ರಾಜ್ಯದ ದುರಂತ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಆರ್‌. ಧ್ರುವನಾರಾಯಣ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಜಿ.ಎಸ್‌.ಟಿಯ ಪಾಲು 13672 ಕೋಟಿ ಬರಬೇಕು. ಅಲ್ಲದೆ ಎನ್‌.ಆರ್‌.ಇ.ಜಿ.ಎ ಸೇರಿದಂತೆ ಹಲವು ಯೋಜನೆಗಳ ಮ್ಯಾಚಿಂಗ್‌ ಗ್ರಾಂಟ್‌ ಬಾಕಿ ಇದೆ. ನಮ್ಮವರೇ ಆದ ಹಣಕಾಸು ಸಚಿವರು ಸಹ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಈಗಾಗದರೆ ರಾಜ್ಯದ ಅರ್ಥಿಕ ದುಸ್ಥಿತಿಯನ್ನು ಪರಿಹರಿಸುವವರು ಯಾರು ಎಂದು ಪ್ರಶ್ನಿಸಿದರು.

ಡ್ರಗ್ಸ್ ಮಾಫಿಯಾ ಗದ್ದಲದ ಮಧ್ಯೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಪತ್ರ ...

ಕೊರೋನಾ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೆ ಪರಿತಪಿಸುತಿದ್ದ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಕೈಗೊಂಡಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ 15 ಸಾವಿರ ಕೋರೋನಾ ವಾರಿಯ​ರ್‍ಸ್ಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ, ಅವರು ಜನರ ಬಳಿ ಹೋಗಿ ಅವರ ಸಂಕಷ್ಟಆಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ವಾರಿಯ​ರ್‍ಸ್ಗಳಿಗೆ 4500 ರೂಗಳ ಮೌಲ್ಯದ 7500 ಆರೋಗ್ಯ ಕಿಟ್‌ಗಳನ್ನು ವಿತರಿಸಲಾಗಿದೆ.15 ಸಾವಿರ ಜನ ವಾರಿಯ​ರ್‍ಸ್ಗಳು ಜಿಲ್ಲೆಯ ಪ್ರತಿ ಗ್ರಾಪಂನ ಮನೆ ಮನೆಗೆ ಭೇಟಿ ನೀಡಿ, ಅವರನ್ನು ಪರೀಕ್ಷಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ಜನರಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಮಾಜಿ ಸಂಸದರು ತಿಳಿಸಿದರು.

ಕರ್ನಾಟಕದ ರಾಜಕಾರಣ ಬಿಸಿ ಏರಲು ಕಾರಣವಾದ ಸುದ್ದಿ ದೆಹಲಿಯಿಂದ ಬಂತು! ...

ಕೊರೋನಾ ಹರಡುವಿಕೆಯನ್ನು ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ಪ್ರಸ್ತುತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಕೆಲವೇ ದಿನಗಳಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ದಿನಕ್ಕೆ 9000 ಕ್ಕೂ ಅಧಿಕ ಕೇಸುಗಳು ಬಂದರೆ, ದೇಶದಲ್ಲಿ 87 ಸಾವಿರಕ್ಕೂ ಅಧಿಕವಿದೆ. ಕೋವಿಡ್‌ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವುದನ್ನು ಬಿಟ್ಟರೆ, ಇನ್ಯಾವುದೇ ಉಪಯೋಗ ಜನರಿಗೆ ಆಗಿಲ್ಲ ಎಂದರು.

ಆರೋಗ್ಯ ಹಸ್ತ ಕಾರ್ಯಕ್ರಮದ ಸಂಯೋಜಕ ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ರಾಜ್ಯಕ್ಕೆ ಹಣಕಾಸು ಸೇರಿದಂತೆ ಹಲವು ರೀತಿಯಲ್ಲಿ ಕೇಂದ್ರ ಸರಕಾರದಿಂದ ತಾರತಮ್ಯ ಅನುಸರಿಸುತ್ತಿದ್ದರು ಇದುವರೆಗೂ ಒಬ್ಬನೇ ಒಬ್ಬ ಸಂಸದರು ಮಾತನಾಡುತ್ತಿಲ್ಲ. ಹಾಗಾದರೆ ಸಂಸದರ ಕಾರ್ಯವ್ಯಾಪ್ತಿ ಏನು, ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.