ಬಂಗಾರಪೇಟೆ (ಡಿ.14): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತಕ್ಕೆ ಅಂತ್ಯ ಹಾಡುಲು ಗ್ರಾಮ ಪಂಚಾಯ್ತಿ ಚುನಾವಣೆ ದಿಕ್ಸೂಚಿಯಾಗಿದ್ದು ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಗ್ರಾಪಂಗಳು ಕಾಂಗ್ರೆಸ್‌ ವಶವಾಗುವುದು ಖಚಿತ ಎಂದು ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ನಾಗರಾಜ್‌ ಭವಿಷ್ಯ ನುಡಿದರು.

ಬೂದಿಕೋಟೆ ಬ್ಲಾಕ್‌ ವ್ಯಾಪ್ತಿಗೆ ಬರುವ 16 ಗ್ರಾಪಂಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರನ್ನು ಕಣಕ್ಕಿಳಿಸಿ, ತಾವೂ ನಾಮಪತ್ರ ಸಲ್ಲಿಸಿ ಮಾತನಾಡಿದ ನಾಗರಾಜ್‌, ಬಿಜೆಪಿ ಸರ್ಕಾರದ ಮೇಲೆ ಯುವಕರು ಹೆಚ್ಚಿನ ಒಲವನ್ನಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಅವರ ಕೈಗೆ ನೀಡಿದರು.

ಕಾಂಗ್ರೆಸ್‌ ತೊರೆಯದಂತೆ ಹಿರಿಯ ನಾಯಕನ ಮನೆಗೆ ಹೋಗಿ ಮನವಿ ಮಾಡಿದ ಡಿಕೆಶಿ .

ಆದರೆ ಎರಡೂ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದರು.