ಬಸವರಾಜ ಬೊಮ್ಮಾಯಿ ಅವರು ಹಿಂದೆ ಕಾಂಗ್ರೆಸ್ ಸೇರಲು ಮುಂದಾಗಿದ್ದರು ಅದಕ್ಕಾಗಿ ಅವರು ಆಸ್ಕರ್ ಫೆರ್ನಾಂಡಿಸ್ ಅವರನ್ನು ಕೂಡ ಭೇಟಿಯಾಗಿದ್ದರು
ಉಡುಪಿ (ಸೆ.21): ಬಸವರಾಜ ಬೊಮ್ಮಾಯಿ ಅವರು ಹಿಂದೆ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಅದಕ್ಕಾಗಿ ಅವರು ಆಸ್ಕರ್ ಫೆರ್ನಾಂಡಿಸ್ ಅವರನ್ನು ಕೂಡ ಭೇಟಿಯಾಗಿದ್ದರು ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬೊಮ್ಮಾಯಿ ಅವರೇನೂ ಆರೆಸ್ಸೆಸ್ ಸಂಘ ಪರಿವಾರದ ಜನ ಅಲ್ಲ. ಅವರು ತಂದೆಯ ಜೊತೆ ಜೆಡಿಎಸ್‌ನಲ್ಲಿ ಇದ್ದವರು. ಎಂ. ಪಿ. ಪ್ರಕಾಶ್ ಕಾಂಗ್ರೆಸ್ ಸೇರುವಾಗ ಬೊಮ್ಮಾಯಿ ಕೂಡ ಕಾಂಗ್ರೆಸ್ ಸೇರುವುದಕ್ಕಾಗಿ ನಮ್ಮನ್ನು ಸಂಪರ್ಕ ಮಾಡಿದ್ದರು ಎಂದರು.
ಕಾಂಗ್ರೆಸ್ಸಿದ್ದರೆ ಜನ ಬೀದಿ ಹೆಣವಾಗುತ್ತಿದ್ದರು: ಬೊಮ್ಮಾಯಿ ವಾಗ್ಬಾಣ!
ಬೊಮ್ಮಾಯಿ ಜಾತ್ಯತೀತ ನಿಲುವು ಇರುವವರು. ಜಾತ್ಯತೀತ ನಿಲುವನ್ನು ಬಿಜೆಪಿಯವರು ಸಹಿಸುತ್ತಾರಾ ಎಂದು ಸೊರಕೆ ಪ್ರಶ್ನಿಸಿದರು. ಬಿಜೆಪಿ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯಂತಹವರು ಬೇಕು. ಆದ್ದರಿಂದ ಬೊಮ್ಮಾಯಿ ಸಿಎಂ ಆಗಿ ಎಷ್ಟುಸಮಯ ಇರುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
