Asianet Suvarna News Asianet Suvarna News

'ಜಾಗೃತಿ ತೆಗೆದುಕೊಂಡು ರಂಝಾನ್ ಪ್ರಾರ್ಥನೆಗೆ ಅವಕಾಶ ಕೊಡಿ'

ಕೋವಿಡ್ 19 ಹೊಸ ರೂಲ್ಸ್/ ಧಾರ್ಮಿಕ ಕೇಂದ್ರಗಳಿಗೆ ಹೇರಿದ ನಿರ್ಭಂಧಗಳನ್ನು ಮರು ಪರಿಶೀಲಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಯು.ಟಿ.ಖಾದರ್ ಮನವಿ/  ಜಾಗೃತ ಕ್ರಮ ಅನುಸರಿಸಿಕೊಂಡು ಆಚರಣೆಗೆ ಅವಕಾಶ ಮಾಡಿಕೊಡಿ

Congress Leader ut khader urge to Govt should allow religious events mah
Author
Bengaluru, First Published Apr 21, 2021, 5:56 PM IST

ಬೆಂಗಳೂರು (ಏ. 21) ಕೋವಿಡ್ 19 ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂದಿನಿಂದ ರಾಜ್ಯಾದ್ಯಂತ ಕಠಿಣ ನಿಯಮಗಳನ್ನು ತಂದಿದ್ದು ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ.

ಪ್ರಸಕ್ತ ತಿಂಗಳಿನಲ್ಲಿ ರಂಝಾನ್ ಆಚರಿಸುತ್ತಿರುವುದರಿಂದ ಮಸೀದಿಗಳಲ್ಲಿ ಕೋವಿಡ್ ಬಗ್ಗೆ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ರಾತ್ರಿ 9 ಗಂಟೆಯವರೆಗೆ ಪ್ರಾರ್ಥನೆ ಸಲ್ಲಿಸಲು ಷರತ್ತುಬದ್ಧ ಅವಕಾಶ ಕಲ್ಪಿಸಿಕೊಡಬೇಕು.  ಹಿಂದೂ ಮತ್ತು ಕ್ರಿಶ್ಚಿಯನ್ ರ ಪೂರ್ವ ನಿಗದಿಯಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಕೋವಿಡ್ 19 ಮುಂಜಾಗೃತ ಕ್ರಮಗಳನ್ನು ಅನುಸರಿಸಿಕೊಂಡು ನಡೆಸಲು ಷರತ್ತುಬದ್ಧ ಅನುಮತಿ ನೀಡಬೇಕೆಂದು ಶಾಸಕ ಯು.ಟಿ.ಖಾದರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.  ರಾಜ್ಯ ಮುಖ್ಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆಯನ್ನು ನಡೆಸಿದ್ದಾರೆ.

ಖಾಸಗಿ ಆಸ್ಪತ್ರೆಗಳ ಬೆಡ್ ಲಭ್ಯತೆ ಪರಿಶೀಲಿಸಿದ ಸುಧಾಕರ್

ಈ ಬಗ್ಗೆ ರಾಜ್ಯ ವಕ್ಛ್ ಇಲಾಖೆ ಹಾಗೂ ಧಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. 

Follow Us:
Download App:
  • android
  • ios