ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪಗೆ ಕಾಂಗ್ರೆಸ್ ಮುಖಂಡ ತನ್ವೀರ್‌ ಸೇಠ್ ಪತ್ರ ಬರೆದಿದ್ದಾರೆ. 30ಕ್ಕೂ ಹೆಚ್ಚು ವಿಷಯ ಪ್ರಸ್ತಾಪಿಸಿ ಕೆಲ ಬೇಡಿಕೆ ಮುಂದಿಟ್ಟಿದ್ದಾರೆ. 

ಮೈಸೂರು (ಮಾ.04): ಮೈಸೂರು ನಗರದ ಅಭಿವೃದ್ಧಿ ಕುರಿತು 30ಕ್ಕೂ ಹೆಚ್ಚು ವಿಷಯ ಪ್ರಸ್ತಾಪಿಸಿರುವ ಶಾಸಕ ತನ್ವೀರ್‌ ಸೇಠ್‌ ಅವರು ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 

ರಾಜ್ಯ ಬಜೆಟ್‌ಗೆ ಸಿಎಂ ಬಿಎಸ್‌ ಯಡಿಯೂರಪ್ಪ ಪೂರ್ವ ತಯಾರಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಶಾಸಕ ತನ್ವೀರ್‌ಸೇಠ್‌ ಪತ್ರ ಬರೆದು ಮೈಸೂರು ನಗರದ ಅಭಿವೃದ್ಧಿ ಕುರಿತು ಸಲಹೆ ನೀಡಿದ್ದಾರೆ. 

ರಾಜಹುಲಿ ಯಡಿಯೂರಪ್ಪ ಮನೆ ಮುಂದೆ ನಿಂತ ಘರ್ಜಿಸುವ ಸಿಂಹ..! .

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಪ್ರತ್ಯೇಕ ಜಲಮಂಡಳಿ ರಚನೆ, ಹೊಸ ಪೊಲೀಸ್‌ ಠಾಣೆಗಳ ಸ್ಥಾಪನೆ, ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹಿಸಿದ ದಂಡ ಮೊತ್ತದ ಶೇ.50 ಹಣವನ್ನು ಸಂಚಾರ ಅಭಿವೃದ್ಧಿಗೆ ಬಳಕೆ, ಪೊಲೀಸ್‌ ಅಕಾಡೆಮಿ ಮತ್ತು ತರಬೇತಿ ಸ್ಥಳಾಂತರಕ್ಕೆ ನಗರದ ಹೊರ ವಲಯದಲ್ಲಿ 100 ಎಕರೆ ಜಾಗ ಮೀಸಲು, ನರಸಿಂಹರಾಜ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರೈಲ್ವೆ ಗೂಡ್ಸ್‌ಶೆಡ್‌ ಬಳಿ ಲಾರಿ ಟರ್ಮಿನಲ್‌ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಿಎಂ ಬಿಎಸ್‌ ಯಡಿಯೂರಪ್ಪಗೆ ಸಲ್ಲಿಸಿದ್ದಾರೆ.