Asianet Suvarna News Asianet Suvarna News

'ಪ್ರಧಾನಿ ಮೋದಿ ಆಶ್ವಾಸನೆ ಬರೀ ಸುಳ್ಳು, ಯಾವುದೂ ಈಡೇರಿಲ್ಲ'..!

ಪ್ರಧಾನಿ ಮೋದಿರವರು ಜನತೆಗೆ ನೀಡಿದ್ದ ಆಶ್ವಾನೆಗಳು ಇದುವರೆಗೂ ಯಾವುದೂ ಈಡೇರಿಲ್ಲ ಈಗ ಮತ್ತೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಬಡವರ ಮೂಗಿಗೆ ಬೆಣ್ಣೆ ಸವರಿದ್ದಾರೆಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಆರೋಪಿಸಿದರು.

congress leader slams pm modi says he gives fake promises
Author
Bangalore, First Published May 16, 2020, 11:45 AM IST
  • Facebook
  • Twitter
  • Whatsapp

ಬಂಗಾರಪೇಟೆ(ಮೇ 16): ಪ್ರಧಾನಿ ಮೋದಿರವರು ಜನತೆಗೆ ನೀಡಿದ್ದ ಆಶ್ವಾನೆಗಳು ಇದುವರೆಗೂ ಯಾವುದೂ ಈಡೇರಿಲ್ಲ ಈಗ ಮತ್ತೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಬಡವರ ಮೂಗಿಗೆ ಬೆಣ್ಣೆ ಸವರಿದ್ದಾರೆಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಆರೋಪಿಸಿದರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರವರ ಹುಟ್ಟು ಹಬ್ಬವನ್ನು ಸಾರ್ವಜನಿಕರಿಗೆ ಸಿಹಿ ಹಂಚಿ ಮತ್ತು ರಕ್ತದಾನ ಮಾಡುವ ಮೂಲಕ ಆಚರಿಸಿ ಬಳಿಕ ಮಾತನಾಡಿದ ಅವರು, ಬಡವರ ಹಾಗೂ ರೈತರ ಸಂಕಷ್ಟಗಳಿಗೆ ಬಿಜೆಪಿ ಸರ್ಕಾರಗಳು ಸ್ಪಂದಿಸುತ್ತಿಲ್ಲ, ಕೊರೊನಾ ಸಂಕಷ್ಟದಲ್ಲಿ ರೈತರ ಯಾವುದೇ ಸಾಲ ವಸೂಲಾತಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು,ಆದರೆ ಬ್ಯಾಂಕುಗಳು ಮಾತ್ರ ರೈತರಿಗೆ ಕಿರುಕುಳ ನೀಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಚಾಲಕರಿಗೆ ಪರಿಹಾರ ನೀಡಿ

ರಾಜ್ಯ ಸರ್ಕಾರ ಸಹ ಚಾಲಕರಿಗೆ 5 ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ, ಆದರೆ ಎಲ್ಲಾ ಚಾಲಕರಿಗೆ ನೀಡದೆ ಕೆಲವರಿಗೆ ಮಾತ್ರ ಸೀಮಿತಗೊಳಿಸಿರುವುದು ತಾರತಮ್ಯವಾಗಿದೆ, ಎಲ್ಲಾ ಚಾಲಕರಿಗೂ ಸಮಾನವಾಗಿ ಪರಿಹಾರ ನೀಡಬೇಕು ಇಲ್ಲವಾದರೆ ಕಾಂಗ್ರೆಸ್‌ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮದ್ಯ ಮಾರಾಟಕ್ಕೂ ಮೊಬೈಲ್‌ ವ್ಯಾನ್‌! ಮನೆ ಬಾಗಿಲಿಗೇ ಬಾಟಲ್

ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಉತ್ತಮ ಸರ್ಕಾರ ಮಾಡಲು ಸಾಧ್ಯವಾಗಿದ್ದು,ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆ ಖಚಿತವಗಿದ್ದು ಆಗ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು. ಈ ವೇಳೆ ಪುರಸಭೆ ಸದಸ್ಯರಾದ ಆರೋಕ್ಯ ರಾಜನ್‌, ಕಪಾಲಿ, ಸುಹೇಲ್‌, ಮುಖಂಡರಾದ ರಂಗರಾಮಯ್ಯ,ಡಿ.ಕಿಶೋರ್‌ ಕುಮಾರ್‌,ಚಲಪತಿ ಮತ್ತಿತರರು ಇದ್ದರು.

Follow Us:
Download App:
  • android
  • ios