'ಸಚಿವ ಸಂಪುಟ ರಚನೆ ಬಳಿಕ ಬಿಜೆಪಿ ಒಳಗೆ ಭಿನ್ನಮತ'
- ಕೊರೋನಾ ಹಾಗೂ ಪ್ರವಾಹ ಸಮಸ್ಯೆಗೆ ಸ್ಪಂದಿಸಬೇಕಿದ್ದ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಕುರ್ಚಿಗಾಗಿ ಕಾದಾಟ
- ಮಂತ್ರಿ ಮಂಡಲ ರಚನೆಯಾದ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಶುರುವಾಗುವ ಲಕ್ಷಣವಿದೆ
ಹುಬ್ಬಳ್ಳಿ (ಆ.02): ಕೊರೋನಾ ಹಾಗೂ ಪ್ರವಾಹ ಸಮಸ್ಯೆಗೆ ಸ್ಪಂದಿಸಬೇಕಿದ್ದ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ಮಂತ್ರಿ ಮಂಡಲ ರಚನೆಯಾದ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಶುರುವಾಗುವ ಲಕ್ಷಣವಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಎರಡು ತಿಂಗಳ ಕಾಲ ಸಚಿವ ಸಂಪುಟ ರಚನೆ ಆಗಿರಲಿಲ್ಲ. ಆಗ ಸಾಕಷ್ಟುತೊಂದರೆ ಆಗಿತ್ತು. ಇದೀಗ ಅದೇ ಸ್ಥಿತಿ ಮರುಕಳಿಸಬಾರದು. ಸಚಿವರು ನಿಯೋಜನೆ ಆಗದೆ ಮುಖ್ಯಮಂತ್ರಿ ಒಬ್ಬರೇ ಎಲ್ಲವನ್ನೂ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ನಡುವೆ ಸಮಸ್ಯೆಗೆ ಸ್ಪಂದಿಸಬೇಕಿದ್ದ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎಂದರು.
ಕರ್ನಾಟಕ ಸಂಪುಟ ವಿಸ್ತರಣೆ : 3 ಹಳಬ ಔಟ್, 6 ಹೊಸಬರು ಇನ್
ಕೊರೋನಾ 3ನೇ ಅಲೆ ತಡೆಯಲು ಸರ್ಕಾರ ಗಟ್ಟಿನಿರ್ಧಾರ ಕೈಗೊಳ್ಳಬೇಕು. ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವವರ ಮೇಲೆ ನಿಗಾವಹಿಸಬೇಕು. ಎಲ್ಲರನ್ನೂ ತಪಾಸಣೆ ಮಾಡಿ ರಾಜ್ಯಕ್ಕೆ ಬಿಡುವ ಪ್ರಕ್ರಿಯೆ ಆಗಬೇಕು. ಕಣ್ತಪ್ಪಿಸಿ ಬರುವವರ ಮೇಲೆ ಹೆಚ್ಚಿನ ಗಮನಹರಿಸಬೇಕಿದೆ. ಕೊರೋನಾ ಪರೀಕ್ಷೆ ಮಾಡಬೇಕು ಎಂದರು.