Karnataka Politics: 'ಬಿಜೆಪಿಯು ತತ್ವ- ಸಿದ್ಧಾಂತ ಇಲ್ಲದ ಬರೀ ಸುಳ್ಳಿನ ಪಕ್ಷ'

*  ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುತ್ತಿರುವ ಬಿಜೆಪಿ 
*  ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ
*  ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿರುವ ಬಿಜೆಪಿ

Congress Leader Shivaraj Tangadagi Slams on BJP grg

ಯಲಬುರ್ಗಾ(ಫೆ.24):  ಬಿಜೆಪಿಯು(BJP) ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ(Students) ವಿಷಬೀಜ ಬಿತ್ತುವ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತಿದೆ. ಜನತೆ ಇವರಿಗೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ(Shivaraj Tangadagi) ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ತಾಲೂಕು ಬ್ಲಾಕ್‌ ಕಾಂಗ್ರೆಸ್‌(Congress) ವತಿಯಿಂದ ಆಯೋಜಿಸಿದ್ದ ಡಿಜಿಟಲ್‌ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿ, ಬಿಜೆಪಿಯು ತತ್ವ- ಸಿದ್ಧಾಂತ ಇಲ್ಲದ ಬರೀ ಸುಳ್ಳಿನ ಪಕ್ಷವಾಗಿದೆ ಎಂದು ಆರೋಪಿಸಿದರು.

Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು

ಬಿಜೆಪಿಯವರಿಗೆ ರಾಜ್ಯದ(Karnataka) ಅಭಿವೃದ್ಧಿ ಬೇಕಿಲ್ಲ. ಕೇವಲ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಇದೀಗ ಶಿಕ್ಷಣ ಕಲಿಯುವ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಇಂತಹ ಕೆಟ್ಟ ಪ್ರವೃತ್ತಿ ಬೆಳೆಸುತ್ತಿರುವುದು ಬಿಜೆಪಿಗರಿಗೆ ಶೋಭೆ ತರುವಂಥದ್ದಲ್ಲ. ಕಾಂಗ್ರೆಸ್‌ ಎಲ್ಲ ವರ್ಗದವರನ್ನು ಸಮಾನ ದೃಷ್ಟಿಯಿಂದ ಕಾಣುವ ಪಕ್ಷವಾಗಿದೆ ಎಂದರು.

ರಾಜ್ಯದಲ್ಲಿ ಡಿಜಿಟಲ್‌ ಕಾಂಗ್ರೆಸ್‌ ಸದಸ್ಯತ್ವ ನೋಂದಣಿಯಲ್ಲಿ(Digital Congress Membership Registration) ಬ್ಯಾಟರಾಯನಪುರ ಪ್ರಥಮ ಸ್ಥಾನದಲ್ಲಿದ್ದರೆ ಇನ್ನು ಕೊಪ್ಪಳ(Koppal) ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರ ದ್ವಿತೀಯ ಸ್ಥಾನದಲ್ಲಿದೆ. ಈ ತಾಲೂಕಿನಲ್ಲಿಯೂ ಸುಮಾರು 30ರಿಂದ 50 ಸಾವಿರದವರೆಗೆ ಕಡ್ಡಾಯವಾಗಿ ಎಲ್ಲರೂ ಸೇರಿ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಜಿಲ್ಲಾ ಡಿಜಿಟಲ್‌ ಸದಸ್ಯತ್ವ ಅಭಿಯಾನದ ಉಸ್ತುವಾರಿ ಶರಣಬಸವರಾಜ ರೆಡ್ಡಿ ಹಾಗೂ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸುಧೀರ ಕೊರ್ಲಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯಂಕಣ್ಣ ಯರಾಶಿ, ರಾಮಣ್ಣ ಸಾಲಭಾವಿ, ಹನುಮಂತಗೌಡ ಪಾಟೀಲ, ಎಂ.ಎಫ್‌. ನದಾಫ್‌, ಅಡಿವೆಪ್ಪ ಭಾವಿಮನಿ, ಸಂಗಣ್ಣ ಟೆಂಗಿನಕಾಯಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಸಾವಿತ್ರಿ ಗೊಲ್ಲರ್‌, ಪರೀದಾಬೇಗಂ ತಂಬಾಕದರ, ಡಾ. ನಂದಿತಾ ದಾನರಡ್ಡಿ, ಗಿರಿಜಾ ಸಂಗಟಿ, ಟಿ. ರತ್ನಾಕರ, ಡಾ. ಶಿವನಗೌಡ ದಾನರಡ್ಡಿ, ಈಶ್ವರ ಅಟಮಾಳಗಿ, ಅಶೋಕ ತೋಟದ, ರಾಜಶೇಖರ ನಿಂಗೋಜಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಸುರೇಶ ದಾನಕೈ, ರಾಜು ಹಡಪದ ಮತ್ತಿತರರು ಇದ್ದರು.

ಕಾಂಗ್ರೆಸ್‌ಗಿರುವಷ್ಟು ಇತಿಹಾಸ ಅನ್ಯ ಪಕ್ಷಕ್ಕಿಲ್ಲ

ಕಾಂಗ್ರೆಸ್‌ಗೆ ಇರುವಷ್ಟು ಇತಿಹಾಸ ಬೇರೆ ಪಕ್ಷಕ್ಕಿಲ್ಲ. ಮಹಿಳೆಯರಿಗೆ(Women) ರಾಜಕೀಯವಾಗಿ ಹೆಚ್ಚು ಸ್ಥಾನಮಾನ ನೀಡಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ ಎಂದು ಕುಕನೂರು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಫರೀದಾಬೇಗಂ ತಂಬಾಕದರ ಹೇಳಿದರು.

Koppal Toy Factory: ಗೊಂಬೆ ಫ್ಯಾಕ್ಟರಿ ಮಂಜೂರು ಮಾಡ್ಸಿದ್ದೇ ನಾನು: ರಾಯರಡ್ಡಿ

ತಾಲೂಕಿನ ಬಳೋಟಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಮಾ. 8ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿ ಸಭೆ ಮತ್ತು ಡಿಜಿಟಲ್‌ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳಾ ಸಂಘಟನೆಯನ್ನು ಬಲಿಷ್ಠಗೊಳಿಸುವ ಮೂಲಕ ಮುಂಬರುವ ಎಲ್ಲ ಚುನಾವಣೆಗಳಲ್ಲಿ(Election) ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ಯಲಬುರ್ಗಾ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್‌ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಗಿರಿಜಾ ಸಂಗಟಿ, ಪಪಂ ಸದಸ್ಯೆ ಡಾ. ನಂದಿತಾ ದಾನರಡ್ಡಿ, ಜಯಶ್ರೀ ಕಂದಕೂರ, ಗೀತಾ ನಿಂಗೋಜಿ, ಶೋಭಾ ಕುರಿ, ವೀಣಾ ವಣಗೇರಿ, ರಾಜಶೇಖರ ನಿಂಗೋಜಿ, ಮಲ್ಲು ಜಕ್ಕಲಿ, ಸುರೇಶ ದಾನಕೈ, ರಾಜು ಹಡಪದ, ಪುನೀತ ಕೊಪ್ಪಳ, ಖಾಜಾವಲಿ ಗಡಾದ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.
 

Latest Videos
Follow Us:
Download App:
  • android
  • ios