Asianet Suvarna News Asianet Suvarna News

'ಬಿಜೆಪಿ ಸರ್ಕಾರಗಳು ಜನರ ನೆಮ್ಮದಿ ಕಿತ್ತುಕೊಂಡಿವೆ'

* ಸುಳ್ಳು ಹೇಳುವುದನ್ನೇ ಕೆಲಸ ಮಾಡಿಕೊಂಡ ಬಿಜೆಪಿ
* ಉಪ್ಪಿನಿಂದ ಹಿಡಿದು ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ
* ಪೆಟ್ರೋಲ್‌, ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
 

Congress Leader Shashidhar Hugar Slams BJP Government grg
Author
Bengaluru, First Published Jun 16, 2021, 11:08 AM IST
  • Facebook
  • Twitter
  • Whatsapp

ಗಜೇಂದ್ರಗಡ(ಜೂ.16): ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ದು ಪ್ರಧಾನಿ ಮೋದಿ ಅವರ ಸಾಧನೆಯಾದರೆ, ಬಿಜೆಪಿ ಸರ್ಕಾರಗಳ ಜನವಿರೋಧಿ ಆಡಳಿತವು ಜನರ ನೆಮ್ಮದಿ ಕಿತ್ತುಕೊಂಡಿವೆ ಎಂದು ತಾ.ಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದ್ದಾರೆ. 

ಪೆಟ್ರೋಲ್‌, ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಮೀಪದ ರಾಜೂರ ಗ್ರಾಮದ ಹೊರವಲಯದಲ್ಲಿನ ಪೆಟ್ರೋಲ್‌ ಬಂಕ್‌ ಎದುರಿಗೆ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಕ್ಕೆ ಬಂದ ದಿನದಿಂದ ಬ್ಯಾಂಕ್‌, ರೈಲ್ವೆ, ವಿಮಾನ ನಿಲ್ದಾಣ, ಬಸ್‌ ನಿಲ್ದಾಣ ಸೇರಿ ಬಹುತೇಕ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಇತ್ತ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ದಿನಗಳಲ್ಲಿ ನೀಡಿದ ಪ್ರತಿಯೊಂದು ಭರವಸೆಗಳನ್ನು ನೀಡಿದ್ದು ಕಾಂಗ್ರೆಸ್‌ ಸಾಧನೆಯಾದರೆ ಬಿಜೆಪಿ ಸುಳ್ಳು ಹೇಳುವುದನ್ನೇ ಕೆಲಸ ಮಾಡಿಕೊಂಡಿದೆ. ಉಪ್ಪಿನಿಂದ ಹಿಡಿದು ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಕಳೆದ 7 ವರ್ಷಗಳ ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನತೆ ದಾರಿ ತಪ್ಪಿಸಲು ಬಿಜೆಪಿ ಮತ್ತೆ ರಾಮನ ಹೆಸರಿನಲ್ಲಿ ಮತ್ತು ಅಲ್ಪಸಂಖ್ಯಾತರ ವಿರೋಧಿ ನೀತಿಯನ್ನು ಮುಂದಿಟ್ಟುಕೊಳ್ಳಲಿದೆ. ಹೀಗಾಗಿ ಜನತೆ ಎಚ್ಚರಿಕೆಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಪಾಠ ಕಲಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಕಡಿತಗೊಳಿಸಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರವಿ ತಳವಾರ ಮಾತನಾಡಿದರು.

3ನೇ ಅಲೆ ದೊಡ್ಡ ಸವಾಲಾಗಿ ಬರ್ತಿದೆ, ಬಿಜೆಪಿಗೆ ಅದರ ಪರಿವೆಯೇ ಇಲ್ಲ: HK ಪಾಟೀಲ

ವಿರೂಪಾಕ್ಷಪ್ಪ ಹಪ್ಪಳದ, ಸುರೇಶಗೌಡ ಪಾಟೀಲ, ಶರಣಪ್ಪ ಹಾದಿಮನಿ, ರಾಜು ನದಾಫ, ಗೂಳಪ್ಪ ಕಮಾಟರ, ಹನಮಂತ ಹಿತ್ತಲಮನಿ, ಮುತ್ತಣ್ಣ ತಳವಾರ, ಕಳಕಪ್ಪ ಚಿಲ್‌ಝರಿ, ಮಲ್ಲಿಕಾರ್ಜುನ ಕೆಂಪನಾಳ, ಶೇಖಪ್ಪ ಮಳಗಿ, ಅಲ್ಲಾಸಾಬ ಮುಜಾವರ, ಮುತ್ತಣ್ಣ ಕನ್ಯಾಳ ಇದ್ದರು.

ತಾಲೂಕಿನ ಗೋಗೇರಿ, ಸೂಡಿ ಹಾಗೂ ಲಕ್ಕಲಕಟ್ಟಿ ಗ್ರಾಮಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪಂಚಾಯಿತಿ ಮತ್ತು ಪೆಟ್ರೋಲ್‌ ಬಂಕ್‌ ಎದುರು ಸೋಮವಾರ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 

Follow Us:
Download App:
  • android
  • ios