ಕಾಂಗ್ರೆಸ್ ತೊರೆದು ಹೋಗಿರುವ ರಮೇಶ್ ಜಾರಕಿಹೊಳಿ ಕಳೆದುಕೊಂಡಿರುವ ವಸ್ತು ಏನೆಂದು ಅವರಿಗೆ ಗೊತ್ತಿದೆ. ಹೀಗೆಂದ ಸಹೋದರ ಸತೀಶ್ ಹೇಳಿದ್ದಾರೆ.
ಬೆಳಗಾವಿ [ಸೆ.23]: ಲಖನ್ ನಾನೂ ಇಬ್ಬರೂ ಒಂದೇ ಎಂದು ರಮೇಶ್ ಜಾರಕಿಹೊಳಿ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ಮೊದಲಿನಿಂದ ಲಖನ್ ರಮೇಶ್ ಜೊತೆ ಇದ್ದರು. ಆದರೆ ಅವರ ವರ್ತನೆಯಿಂದ ಬೇಸತ್ತು ನನ್ನ ಬಳಿ ಬಂದರು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಕ್ಟೋಬರ್ 22 ರಂದು ನಡೆಯುವ ಗೋಕಾಕ್ ಕ್ಷೇತ್ರದ ಉಪ ಚುನಾವಣೆಗೆ ಲಖನ್ ಅವರೇ ಕಾಂಗ್ರೆಸ್ ಅಭ್ಯರ್ಥಿ. ಅವರು ಯಾವುದೇ ಕಾರಣದಿಂದ ಹಿಂದೆ ಸರಿಯಲ್ಲ. ಈ ಚುನಾವಣೆಯನ್ನು ನಾವು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ಇನ್ನು ರಮೇಶ್ ಜಾರಕಿಹೊಳಿ ಕಳೆದುಕೊಂಡ ವಸ್ತು ಯಾವುದು ಎಂದು ಅವರೇ ಬಹಿರಂಗ ಪಡಿಸಿದರೆ ಒಳ್ಳೆಯದರು. ಅದೇನೆಂದು ಅವರಿಗೆ ಗೊತ್ತಿದ್ದರು ನಾಟಕವಾಡುತ್ತಿದ್ದಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನಿದೆ. ಕಾಂಗ್ರೆಸ್ ಸಮಾವೇಶಕ್ಕೆ ಬಂದಲ್ಲಿ ಇದನ್ನು ಕೇಳಲಾಗುತ್ತೆ ಎಂದು ಬಹಿರಂಗ ಸವಾಲು ಹಾಕಿದರು.
