Asianet Suvarna News Asianet Suvarna News

ಧರ್ಮದಿಂದಲೇ ರಾಜಕಾರಣ ಮಾಡುತ್ತೇನೆ: ಸಂತೋಷ ಲಾಡ್‌

ನನ್ನ ಸೋಲಿಗೆ ಜನರು ಕಾರಣರಲ್ಲ. ಬದಲಿಗೆ ನನ್ನ ಎದುರಾಳಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಮತದಾರರ ಮನಸ್ಸು ಬದಲಿಸಿದರು. ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷದ ವಿರುದ್ಧ ಮಾತನಾಡುವದನ್ನು ಬಿಡಬೇಕು ಎಂಬ ಸಂದೇಶನ ರವಾನಿಸಿದ ಸಂತೋಷ ಲಾಡ್‌
 

Congress Leader Santosh Lad Talks Over Politics
Author
Bengaluru, First Published Sep 9, 2020, 9:46 AM IST

ಅಳ್ನಾವರ(ಸೆ.09): ಕಲಘಟಗಿ ಕ್ಷೇತ್ರವನ್ನು ರಾಜಕೀಯ ಅಜಂಡಾವನ್ನಾಗಿ ಬಳಸಿಕೊಂಡಿಲ್ಲ. ಜನರ ಸೇವೆಯನ್ನೆ ಮುಖ್ಯ ಗುರಿಯನ್ನಾಗಿಸಿಕೊಂಡಿದ್ದು ದುಡ್ಡು ಮಾಡುವ ಉದ್ದೇಶವಿಲ್ಲ. ಧರ್ಮದಿಂದಲೆ ರಾಜಕಾರಣ ಮಾಡುವೇ ಹೊರತು ಅಧರ್ಮದ ಹಾದಿಯನ್ನು ಎಂದೂ ತುಳಿದಿಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್‌ ಹೇಳಿದ್ದಾರೆ.

ಪಟ್ಟಣದ ಉಮಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಸೋಲಿಗೆ ಜನರು ಕಾರಣರಲ್ಲ. ಬದಲಿಗೆ ನನ್ನ ಎದುರಾಳಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಮತದಾರರ ಮನಸ್ಸು ಬದಲಿಸಿದರು. ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷದ ವಿರುದ್ಧ ಮಾತನಾಡುವದನ್ನು ಬಿಡಬೇಕು ಎನ್ನುವ ಸಂದೇಶವನ್ನು ಲಾಡ್‌ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಶಾಸಕನಾಗಿ ಎರಡು ಅವಧಿ ಕಾಲ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಳ್ನಾವರ ತಾಲೂಕು ಕೇಂದ್ರ ಮತ್ತು ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಕಾಳಿ ನದಿ ಯೋಜನೆ ಮಂಜೂರಾತಿ ಪ್ರಮುಖ ಕಾರ್ಯಗಳಾಗಿವೆ. ದುಡ್ಡು ಕೊಡುವದರಿಂದ ದೊಡ್ಡವನಾಗುವುದಿಲ್ಲ. ದುಡಿನಿಂದ ಒಳ್ಳೆಯ ವ್ಯಕ್ತಿ ಎನಿಸುವುದಿಲ್ಲ. ರಾಜಕಾರಣವೂ ಕೇವಲ ಟೀಕೆಗೆ ಮಾತ್ರ ಸೀಮಿತವಾಗಬಾರದು ಎಂದರು.

ಚೆಕ್​​ ಬೌನ್ಸ್​ ಪ್ರಕರಣ: ಸಂಕಷ್ಟದಲ್ಲಿ ಸಿಲುಕಿರುವ ಸಚಿವ ಸಂತೋಷ್​ ಲಾಡ್​​

ನೆರೆ ಪ್ರವಾಹ ಮತ್ತು ಕೊರೋನಾ ಸಂಕಷ್ಟದಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿರುವುದು ನಿಜ. ಅದನ್ನೇ ಮುಂದಿಟ್ಟುಕೊಂಡು ಜನ ಸೇವೆಯಿಂದ ನುಣುಚಿಕೊಳ್ಳದೆ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಲಾಡ್‌, ನಮ್ಮ ಹೋರಾಟ ಬಿಜೆಪಿ ಮತ್ತು ಇನ್ನಿತರ ಪಕ್ಷದ ವಿರುದ್ಧವಾಗದೆ ನಾವು ಮಾಡಿರುವ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟಾಗಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಾಗಿದೆ. ಮುಂದೆ ನಿಯಮಿತವಾಗಿ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಜನರೊಂದಿಗೆ ಇರುತ್ತೇನೆ. ನನ್ನ ಸ್ನೇಹಿತರೊಬ್ಬರು ಕ್ಷೇತ್ರದಲ್ಲಿ ಸುತ್ತಿ ನಾನೇ ಮುಂದಿನ ಶಾಸಕ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಪಕ್ಷ ಯಾರಿಗೆ ಟಿಕೇಟ್‌ ನೀಡುತ್ತದೆಯೋ ಅವರು ಸ್ಪರ್ಧಿಸುತ್ತಾರೆ. ಯಾರಲ್ಲಿಯೂ ಗೊಂದಲ ಬೇಡ. ನನ್ನ ಜೀವ ಇರುವವರೆಗೂ ನಾನು ಕ್ಷೇತ್ರದ ಜನರೊಂದಿಗೆ ಉಳಿಯುತ್ತೇನೆ ಎನ್ನುವ ಮೂಲಕ ನಾಗರಾಜ ಛಬ್ಬಿ ಅವರಿಗೆ ಟಾಂಗ್‌ ನೀಡಿದರು.

ಸಭೆಯಲ್ಲಿ ಅಳ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಶ್ರೀಕಾಂತ ಗಾಯಕವಾಡ, ಮಲ್ಲನಗೌಡ ಪಾಟೀಲ, ರೂಪೇಶ ಗುಂದಕಲ್‌, ಛಗನಲಾಲ ಪಟೇಲ, ಮಧು ಬಡಸ್ಕರ, ಮಾರುತಿ ಬಾಂಗಡಿ, ರಮೇಶ ಕುನ್ನೂರಕರ ಇದ್ದರು.
 

Follow Us:
Download App:
  • android
  • ios