ಧಾರವಾಡ(ಆ.28): ಬಿಜೆಪಿ ಸರ್ಕಾರ ಯಾವಾಗಲೂ ಒಡೆದ ಮನೆಯಾಗಿದೆ. ಈ ಹಿಂದೆ ಮೂವರು ಸಿಎಂ ಆಗಿದ್ದರು. ಮೂರು ಸಿಎಂ ಬದಲಾವಣೆಯಾಗಿ ಮೂರಾಬಟ್ಟೆ ಆಗಿ ಹೋದ್ರು, ಈಗ ಕೂಡ ಆಂತರಿಕ ಭಿನ್ನಾಭಿಪ್ರಾಯಗಳು ಇವೆ. ಬಿಜೆಪಿ ಸರ್ಕಾರ ಬಂದಾಗ ಭ್ರಷ್ಟಾಚಾರ ಮಿತಿ‌ ಮೀರುತ್ತದೆ. ಬಿಜೆಪಿಯವರು ಅಧಿಕಾರಕ್ಕೆ ಬಂದಾಗಲೇ ರಾಜ್ಯದಲ್ಲಿ ಪ್ರವಾಹ ಬರುತ್ತಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಅವರು ಹೇಳಿದ್ದಾರೆ. 

ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ನಮ್ಮ ಪಕ್ಷದವರೇ ಆದ ಎಚ್.ಕೆ. ಪಾಟೀಲರು ಅಧ್ಯಕ್ಷರು ಇದ್ದಾರೆ. ನಾನೂ ಕೂಡ ಸದಸ್ಯನಾಗಿ ಆ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಯಾವುದಾದರೂ ದೂರು ಬಂದಾಗ ಸ್ವಂತ ಪರಿಶೀಲನೆ ಮಾಡುವ ಅಧಿಕಾರ ಇದೆ ಎಂದು ಹೇಳಿದ್ದಾರೆ.

'ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ಮೋದಿಗೆ ರಾಜ್ಯದ ಜನ ಛೀ..ಥೂ...ಅಂತ ಉಗುಳ್ತಾರೆ'

ಆದರೆ ಪರಿಶೀಲನೆಗೆ ಹೋಗದಂತೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಅವರೇ ಹೀಗೆ ಹೇಳಿದರೆ ಅದರ ಅರ್ಥ ಏನು?. ಕೆಲಸ ಮಾಡೋದಾರು ಹೇಗೆ ಎಂದು ಎಸ್.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.