ಮಂಗಳೂರು (ಫೆ.08): ಬಿಲ್ಲವ ಸಮುದಾಯ ಮತ್ತು ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ ಅಧಿಕಾರಿ ಮುಖಕ್ಕೆ 3 ದಿನಗಳ ಒಳಗಾಗಿ ಯಾರಾದರೂ ಬಿಲ್ಲವ ಸಮುದಾಯದ ಯುವಕರು ಮಸಿ ಬಳಿದರೆ 1 ಲಕ್ಷ ಬಹುಮಾನ ನೀಡುವುದಾಗಿ ಮಾಜಿ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

ಬಿಲ್ಲವ, ಕೋಟಿ ಚೆನ್ನಯ್ಯಗೆ ಅವಹೇಳನ : ಬಿಜೆಪಿ ಮುಖಂಡ ಜಗದೀಶ್ ವಿರುದ್ಧ ದೂರು ...

ಭಾನುವಾರ ಫೇಸ್ಬುಕ್‌ ಲೈವ್‌ನಲ್ಲಿ ಮಾತಾಡಿರುವ ಅವರು, ಮೂರು ದಿನಗಳ ಒಳಗಾಗಿ ಕೋಟಿ ಚೆನ್ನಯ್ಯರ ಗರಡಿಗೆ ಬಂದು ಕ್ಷಮೆ ಯಾಚನೆ ಮಾಡದಿದ್ದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

 

ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿಯವರಲ್ಲಿ ಅಧಿಕಾರಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ

ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಬಲ್ಲವ ಸಮುದಾಯದ ಬಗ್ಗೆ ಅವಹೇಳನ ಮಾಡಿದ ಆರೋಪ ಎದುರಿಸುತ್ತಿದ್ದಾರೆ.