ಚಿಕ್ಕೋಡಿ (ಅ.27): ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆಗೆ ಕಸರತ್ತು ನಡೆಸಿದ್ದರೆ, ಇತ್ತ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 

‘ಸುರೇಶ ಅಂಗಡಿ ಕುಟುಂಬಸ್ಥರಿಗೆ ಬಿಜೆಪಿ ಟಿಕೆಟ್‌ ನೀಡಿದರೆ ಅವರ ಪರವಾಗಿ ನಾನೇ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. 

ಒಂದೊಂದು ಮತವೂ ಅಮೂಲ್ಯ, ಉಪಚುನಾವಣೆ ಸಂದರ್ಭ ಎಲೆಕ್ಷನ್ ಬಹಿಷ್ಕಾರ!

ನನ್ನ ಮಗನನ್ನು ಚಿಕ್ಕೋಡಿಯಲ್ಲಿ ಗೆಲ್ಲಿಸಿದಂತೆ ಬೆಳಗಾವಿಯಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಪರ ಮತಯಾಚನೆ ಮಾಡುತ್ತೇನೆ.

ಕಾಂಗ್ರೆಸ್‌ ಹೈ ಕಮಾಂಡ್‌ ಏನ್‌ ಮಾಡತಾರೆ ನೋಡೆ ಬಿಡ್ತೇನ, ನನಗೂ ಸಾಕಾಗಿದೆ’ ಎಂದು ಹೇಳಿರುವ ವಿಡಿಯೋ ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ.