ಮಹಿಳಾ ಪಿಡಿಓಗೆ ಜೀವ ಬೆದರಿಕೆ ಹಾಕಿದ್ರಾ ಕೈ ಮುಖಂಡ ಪರಮೇಶ ಕಾಳೆ?

  •  ಮಹಿಳಾ ಪಿಡಿಓಗೆ ಜೀವ ಬೆದರಿಕೆ ಹಾಕಿದ ಕೈ ಮುಖಂಡ ಪರಮೇಶ ಕಾಳೆ
  •  ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಹೈ ಡ್ರಾಮಾ
  •  ನಾನಾ ನೀನಾ ಎಂದು ಬೈದಾಡಿಕೊಂಡ ಪಿಡಿಓ ಪುಷ್ಪಲತಾ, ಕೈ ಮುಖಂಡ ಕಾಳೆ
Congress leader Paramesh Kale threatened of female PDO at dharwad rav

ಧಾರವಾಡ (ಅ.21) : ಧಾರವಾಡ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯತಿ ಪಿಡಿಓ ಪುಷ್ಪಲತಾ ಮೇದಾರ ಮತ್ತು ಕೈ ಮುಖಂಡ ಪರಮೇಶ ಕಾಳೆ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡ ಘಟನೆ ನಡೆದಿದೆ. ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಬ್ಬರಿಗೊಬ್ಬರು ಅವಾಚ್ಯವಾಗಿ ಬೈದಾಡಿಕೊಂಡಿದ್ದಲ್ಲದೆ, ಜೀವ ಬೆದರಿಕೆ ಹಾಕಲಾಗಿದೆ. 

ಮನೆ ಕಟ್ಟಲು ಪಿಡಿಓ ಅಡ್ಡಿ: ಹೈ ಟೆನ್ಷನ್ ಕಂಬವೇರಿದ ರೈತ

ಪಿಡಿಓ ಪುಷ್ಪಲತಾ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಕೈ ಮುಖಂಡ ಪರಮೇಶ ಕಾಳೆ(Paramesh Kaale) ಕೂಡಾ ಜಿಲ್ಲಾ ಪಂಚಾಯತ ಕಚೇರಿಗೆ ನುಗ್ಗಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಪ್ರತಿಭಟನೆ  ನಡೆಸಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಜೀವ ಬೆದರಿಕೆ ಹಾಕುವ ಹಂತಕ್ಕೆ ಹೋಗಿದ್ದಾರೆ.

ಕೈ ಮುಖಂಡ ಪರಮೇಶ ಕಾಳೆ, ಪಿಡಿಓ ಪುಷ್ಪಲತಾ ಮೇದಾರರಂಥ ಭ್ರಷ್ಟ ಅಧಿಕಾರಿಗಳನ್ನ ನಮ್ಮ‌ ಗ್ರಾಮ ಪಂಚಾಯತ ಗೆ ಹಾಕಬೇಡಿ ಎಂದು ಹೇಳಿದ್ದಾನೆ. ಈ ವೇಳೆ ಪಿಡಿಓ, "ನಾನು ಏನು ಭ್ರಷ್ಟಾಚಾರ ಮಾಡಿದ್ದೇನೆ ಅದನ್ನ ಬಹಿರಂಗಪಡಿಸಿ ಎಂದು ಪರಮೇಶ ಕಾಳೆ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಅದು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎದುರೇ ಇಬ್ಬರೂ ಕೂಗಾಡಿದ್ದಾರೆ.

ಬಲಗೊಳ್ಳಲಿ ಧಾರವಾಡ ಅಕಾಶವಾಣಿ ಸುದ್ದಿ ವಿಭಾಗ

ಪಿಡಿಓ ಪುಷ್ಪಲತಾ ಮೇದಾರ ಅವರು ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಕೈ ಮುಖಂಡ ಪರಮೇಶ ಕಾಳೆ ವಿರುದ್ದ ಜೀವ ಬೇದರಿಕೆಯ ಕೇಸ್ ದಾಖಲು ಮಾಡಿದ್ದಾರೆ. ಇತ್ತ ಪರಮೇಶ ಕಾಳೆ ಸಹ ಕೌಂಟರ್ ಪ್ರಕರಣವನ್ನ ಪಿಡಿಒ ಪುಷ್ಪಲತಾ ಮೇಲೆ ದೂರು ದಾಖಲಿಸಿದ್ದಾನೆ. ಎರಡೂ ಪ್ರಕರಣಗಳನ್ನ ಉಪನಗರ ಪೋಲಿಸರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. 

ಇನ್ನು ಜಿಲ್ಲಾ ಪಂಚಾಯತ ಆವರಣದ ಹೊರಗೆ ಮತ್ತು ಆವರಣದಲ್ಲಿ ಸಿಸಿ ಟಿವಿ ಇರಲೇಬೇಕು ಯಾಕಂದ್ರೆ ಕಚೇರಿಯಲ್ಲಿ ಯಾವಾಗ ಎನಾಗುತ್ತೆ ಎಂಬುದು ಎಲ್ಲವೂ ದಾಖಲೆಗಳು ವಿಡಿಯೋ ದಾಖಲೆಗಳು ಇರುತ್ತವೆ. ಆದರೆ ಪಂಚಾಯತಿ ಆವರಣದಲ್ಲಿ ಸಿಸಿ ಟಿವಿ ಇಲ್ಲ. ಅವಶ್ಯಕವಾಗಿ ಇರಲೇಬೇಕಿತ್ತು. ನಿರ್ಲಕ್ಷ್ಯದಿಂದಾಗಿ ಸಿಸಿಟಿವಿ ಅಳವಡಿಸಿಲ್ಲ ಅನಿಸುತ್ತದೆ. ಒಂದು ವೇಳೆ ಸಿಸಿಟಿವಿ ಇರದೆ ಇಂಥ ಘಟನೆಗಳು ಮರುಕಳಿಸುತ್ತವೆ. ಇಲ್ಲಿ ಯಾರು ಯಾರಮೇಲೆ ಕೂಗಾಡಿದ್ದಾರೆ. ಈ ಘಟನೆಯಲ್ಲಿ ಯಾರದ್ದು ತಪ್ಪಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಯೇ ಹೇಳಬೇಕು. 

Latest Videos
Follow Us:
Download App:
  • android
  • ios