* ಜನರ ಸಂಕಷ್ಟಗಳಿಗೆ ಬಿಜೆಪಿ ಸ್ಪಂದಿಸಲಿ* ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಪಾಟೀಲ ಸಾಂತ್ವನ* ಜನರನ್ನು ದುಬಾರಿ ಜೀವನದತ್ತ ದೂಡುತ್ತಿವೆ ಬಿಜೆಪಿ ಸರ್ಕಾರಗಳು
ಡಂಬಳ(ಆ.04): ಮಹಾಮಾರಿ ಕೊರೋನಾ ರೋಗ ನಿಯಂತ್ರಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಅಧಿಕಾರದ ಗದ್ದುಗೆಗಾಗಿ ಬಿಜೆಪಿ ಸರ್ಕಾರ ಕಚ್ಚಾಡುತ್ತಾ ಸಮಯ ವ್ಯಯ ಮಾಡುತ್ತಿದ್ದು, ಇದರಿಂದಾಗಿ ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ ಪಾಟೀಲ ಹೇಳಿದ್ದಾರೆ.
ಡಂಬಳ ಹೋಬಳಿಯ ಮೇವುಂಡಿ, ಡಂಬಳ, ಜಂತ್ಲಿ ಶಿರೂರ, ಪೇಠಾ ಆಲೂರ, ಯಕ್ಲಾಸಪುರ ಗ್ರಾಮದಲ್ಲಿ ಕೊರೋನಾ ರೋಗದಿಂದ ಮೃತಪಟ್ಟ ಕುಟುಂಬಗಳ ಮನೆ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ,
'ಕಟ್ಟಾ ಹಿಂದುತ್ವದ ಕಟ್ಟಾಳು ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಿ'
ಇಂದು ಕೇಂದ್ರ ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗುವುದರ ಮೂಲಕ ಜನರನ್ನು ದುಬಾರಿ ಜೀವನದತ್ತ ದೂಡುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಪ್ರತಿಯೊಬ್ಬ ಪ್ರಜೆ ಪರಿವಾರವಾಗಿದೆ. ಆ ಹಿನ್ನಲೆಯಲ್ಲಿ ಕೊರೋನಾ ರೋಗ ಬಾಧೆಗೆ ಒಳಗಾದವರ ಚಿಕಿತ್ಸೆಗೆ, ರೋಗ ತಡೆಯಲು ಹತ್ತು ಹಲವು ಸುರಕ್ಷತಾ ಕ್ರಮಗಳ ಮೂಲಕ ಜನತೆಯ ಸುರಕ್ಷತೆಗೆ ಆದ್ಯತೆ ನೀಡಿದೆ ಎಂದರು.
ಐ.ಎಸ್. ಪೂಜಾರ, ಗೋಣಿಬಸಪ್ಪ ಕೋರ್ಲಹಳ್ಳಿ ಮಾತನಾಡಿದರು. ಈರಣ್ಣ ಪೂಜಾರ, ಕುಮಾರಸ್ವಾಮಿ ಹಿರೇಮಠ, ಬಸುರಾಜ ಪೂಜಾರ, ಮರಿತೆಮಪ್ಪ ಆದಮ್ಮನವರ, ಜಂದಿಸಾಬ ಸರ್ಕಾವಸ್, ಮುತ್ತು ಮಠದ, ಮಂಜು ಬಿಸನಳ್ಳಿ, ಬಸುರಡ್ಡಿ ಬಂಡಿಹಾಳ, ಹಾಲಪ್ಪ ಡೊಳ್ಳಿನ, ಬಸುರಾಜ ಪೂಜಾರ, ಶ್ರೀಕಾಂತ ರಾಯರಡ್ಡಿ, ಕುಬೇರಪ್ಪ ಕೊಳ್ಳಾರ, ಮಹೇಶ ಕೊರ್ಲಹಳ್ಳಿ, ಸೋಮಪ್ಪ ಹೈತಾಪೂರ, ಹೈಮಣ್ಣ ಪೂಜಾರ, ಅಶೋಕ ಕಬ್ಬೇರಳ್ಳಿ, ಹಾಲಪ್ಪ ಕಬ್ಬೇರಳ್ಳಿ, ಮಹಾಂತೇಶ ಮುಗಳಿ, ಬಾಬುಸಾಬ ಸರ್ಕಾವಾಸ ಇದ್ದರು.
