ಚಿಕ್ಕಮಗಳೂರು: ಕಾಫಿನಾಡಲ್ಲಿ ಎಂ.ಬಿ.ಪಾಟೀಲ್ ಟೆಂಪಲ್ ರನ್

ಶೃಂಗೇರಿ ಮಠ, ಹರಿಹರಪುರ ಮಠ, ದತ್ತಪೀಠಕ್ಕೆ ಭೇಟಿ, ಅತಿವೃಷ್ಠಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲ ಎಂ.ಬಿ.ಪಾಟೀಲ್ ಕಿಡಿ

Congress Leader MB Patil Temple Run in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್‌, ಚಿಕ್ಕಮಗಳೂರು

ಚಿಕ್ಕಮಗಳೂರು(ಸೆ.10): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಟೆಂಪಲ್ ರನ್ ನಡೆಸಿದ್ದಾರೆ. ನಿನ್ನೆ(ಶುಕ್ರವಾರ) ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದಿಂದ ಆರಂಭಿಸಿ ಮಧ್ಯಾಹ್ನ ಹರಿಹರಪುರ ಮಠದಲ್ಲಿ ದೇವರ ದರ್ಶನ ಪಡೆದು ಸಂಜೆ ದತ್ತಪೀಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಕಾಫಿನಾಡಿನಲ್ಲಿ ಟೆಂಪಲ್ ರನ್

ಮಲೆನಾಡಿನ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ, ಹರಿಹರಪುರ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಶಾರದಾಮಾತೆ ಹಾಗೂ ಶ್ರೀ ಮಠದ ಉಭಯ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದವನ್ನು ಪಡೆದ್ದಾರೆ. ತದನಂತರ ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಕೇಂದ್ರವಾದ ಇನಾಂ ದತ್ತಾತ್ರೇಯ ಪೀಠಕ್ಕೂ ಭೇಟಿ ನೀಡಿ ಪೂಜೆ ಸಲ್ಲಿದ್ದಾರೆ. 

BJP STATE INCHARGE 15 ರಾಜ್ಯಗಳಿಗೆ ಉಸ್ತುವಾರಿ ನಾಯಕರ ಘೋಷಿಸಿದ ಬಿಜೆಪಿ, ಮಾಜಿ ಸಿಎಂಗೆ ಮಹತ್ತರ ಜವಾಬ್ದಾರಿ!

ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರೀಯವಾಗಿದ್ದು, ಕಮಿಷನ್ ಭ್ರಷ್ಟಾಚಾರದಲ್ಲಿ ಸರಕಾರ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.ಶೇ 40 ರಷ್ಟು ಕಮಿಷನ್ ಸರ್ಕಾರವಾಗಿದ್ದು, ಬಿಬಿಎಂಪಿಯಲ್ಲಿ ಶೇ.50 ಕಮಿಷನ್ ಪಡೆಯಲಾಗುತ್ತಿದೆ.ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಸಿತವಾಗಿದೆ. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆ ಸದೃಡವಾಗಿದ್ದು, ಬಿಜೆಪಿ ಸರಕಾರ ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆ ಏರಿಸಿದೆ. ಪೆಟ್ರೋಲ್ ಉತ್ಪನ್ನಗಳು, ಗ್ಯಾಸ್ ದರವನ್ನು ಆಗಾಗ್ಗೆ ಏರಿಸಿ, ಜಿಎಸ್‌ಟಿ ಎಲ್ಲಾ ವಸ್ತುಗಳಿಗೆ ವಿಧಿಸುವ ಮೂಲಕ ಜನರ ಬದುಕನ್ನು ದುಸ್ತರವಾಗಿಸಿದೆ. ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಗೆ ಈಗಾಗಲೇ ಸಿದ್ದತೆ ನಡೆಸಿದ್ದು, ಶೀಘ್ರದಲ್ಲಿ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳ ಸಭೆ ನಡೆಸಲಾಗುತ್ತದೆ. ಕಾರ್ಯಕರ್ತರ ಮೂಲಕ ಬಿಜೆಪಿ ವೈಫಲ್ಯ ಮತದಾರರಿಗೆ ಮುಟ್ಟಿಸಲಾಗುತ್ತದೆ. ಬಿಜೆಪಿ ಪಕ್ಷವು ಬಾವನೆ ಕೆರಳಿಸಿ, ಅಧಿಕಾರ ಮಾಡುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅತಿವೃಷ್ಠಿಯಿಂದ ಕಂಗೆಟ್ಟಿರುವ ರೈತರಿಗೆ ಅತಿ ಹೆಚ್ಚು ಪರಿಹಾರ ನೀಡಬೇಕು ಎಂದು ವಿಧಾನಸಭೆಯಲ್ಲಿ ಒತ್ತಾಯಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಾಂತ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ.ಇದಕ್ಕೂ ಮೊದಲು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ, ತೋರಣಗಣಪತಿಯಲ್ಲಿ ಈಡುಗಾಯಿ ಒಡೆದರು. ಗುರುಭವನಕ್ಕೆ ತೆರಳಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.
 

Latest Videos
Follow Us:
Download App:
  • android
  • ios