ಮಧುಗಿರಿ (ಫೆ.12):  ಮಧುಗಿರಿ ಜಿಲ್ಲೆ ಆಗುವ ಎಲ್ಲ ಲಕ್ಷಣಗಳಿದ್ದರೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಆಳುವ ಸರ್ಕಾರವನ್ನು ಕೇಳುವವರು ಇಲ್ಲದ ಕಾರಣ ನನೆಗುದಿಗೆ ಬಿದ್ದಿದೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಪಟ್ಟಣದ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಧುಗಿರಿ ಸ್ವಾತಂತ್ರ ಪೂರ್ವದಲ್ಲೇ ಉಪವಿಭಾಗಾಧಿಕಾರಿ ಕಚೇರಿ ಇದೆ. ಡಾ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಕಟ್ಟಿಕೊಂಡಿರುವ ಮಧುಗಿರಿ, ಪಾವಗಡ, ಶಿರಾ ಹಾಗೂ ಕೊರಟಗೆರೆ ತಾಲೂಕುಗಳು ಸೇರಿ ಉಪವಿಭಾಗ ಕೇಂದ್ರವಾಗಿತ್ತು. ಪ್ರಸ್ತುತ ಶೈಕ್ಷಣಿಕ ಜಿಲ್ಲೆಯಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಖಜಾನೆ ಹೊರತುಪಡಿಸಿ, ಎಲ್ಲ ಇಲಾಖೆಗಳು ಮಧುಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

'ಕುಮಾರಸ್ವಾಮಿಯೇ ಒಳಒಪ್ಪಂದದ ಪ್ರಿನ್ಸಿಪಾಲ್'; ಮಾಜಿ ಶಾಸಕ ಲೇವಡಿ .

31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಿದೆ. ತುಮಕೂರು ಅತಿ ದೊಡ್ಡ ಜಿಲ್ಲೆಯಾಗಿದೆ. ಇದನ್ನು ವಿಭಜಿಸಿ ಮಧುಗಿರಿ ಜಿಲ್ಲೆಯನ್ನಾಗಿಸಿ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಬೇಕಾದ ಇಲ್ಲಿನ ಶಾಸಕರು ಇಚ್ಚಾಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ನೂತನ ಗ್ರಾ.ಪಂ. ಸದಸ್ಯರುಗಳಿಗೆ ಸನ್ಮಾನ:  ಮಾರ್ಚ್ 7 ರಂದು ಮಧುಗಿರಿ ಮತ ಕ್ಷೇತ್ರ ಮತ್ತು ಪುರವರ ಹೋಬಳಿಯವರು ಸೇರಿದಂತೆ 500ಕ್ಕೂ ಅಧಿಕ ಗ್ರಾಪಂ ಸದಸ್ಯರಿಗೆ ಕಾಂಗ್ರೆಸ್‌ನಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ತಿರ್ಮಾಮಾನಿಸಲಾಗಿದೆ ಎಂದು ತಿಳಿಸಿದರು.