ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್‌ ಹಾಕ್ಬೇಡಿ ಅಂತ ಚುನಾವಣಾ ಪ್ರಚಾರ ಮಾಡಿದ್ದ ಇವರು ಕಾಂಗ್ರೆಸ್‌ ಕಚೇರಿ ಬರ್ತಾರೆ, ಇವರು ಚುನಾವಣೆಯಲ್ಲಿ ಮಾಡಿದ ಪಕ್ಷ ದ್ರೋಹದ ವಿರುದ್ಧ ದೂರು ನೀಡಿದ್ದೇನೆ ಎಂದು ಮುನಿಯಪ್ಪ ರಮೇಶ್ ಕುಮಾರ್ ವಿರುದ್ಧ ಆರೋಪಿಸಿದ್ದಾರೆ. 

ಕೋಲಾರ [ಆ.29]:  ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿರುವ ರಮೇಶ್‌ ಕುಮಾರ್‌ಗೆ ಮಾನ ಮರ್ಯಾದೆ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್‌ ಹಾಕ್ಬೇಡಿ ಅಂತ ಚುನಾವಣಾ ಪ್ರಚಾರ ಮಾಡಿದ್ದ ಇವರು ಕಾಂಗ್ರೆಸ್‌ ಕಚೇರಿ ಬರ್ತಾರೆ, ಇವರು ಚುನಾವಣೆಯಲ್ಲಿ ಮಾಡಿದ ಪಕ್ಷ ದ್ರೋಹದ ವಿರುದ್ಧ ನಾನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರ ಪಟ್ಟಿಮತ್ತು ವಿವರಗಳನ್ನು ಸಂರ್ಪೂಣವಾಗಿ ಕೊಟ್ಟಿದೇನೆ ಎಂದು ಮಾಜಿ ಸಂಸದ ಮುನಿಯಪ್ಪ ಹೇಳಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರನ್ನು ಬೆಳೆಸಿದ್ದೇ ನಾನು: ರಮೇಶ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು ನಾನು, ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ಗೆಲ್ಲಿಸಿದ್ದೂ ನಾನೇ, ಪಕ್ಷದಲ್ಲಿ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆಂದರೆ ಅದಕ್ಕೆ ನಾನೇ ಕಾರಣ. 

ಇಷ್ಟೆಲ್ಲ ನನ್ನಿಂದ ಬೆಳೆದು ನನಗೇ ಮೋಸ ಮಾಡಿದ್ದಾರೆ, ನನ್ನ ವಿರುದ್ಧ ಚುನಾವಣೆ ಮಾಡಿದ್ದಾರೆ. ಇವರಿಗೆ ಮರ್ಯಾದೆ ಇದ್ದರೆ ಕಾಂಗ್ರೆಸ್‌ ಕಚೇರಿಗೆ ಕಾಲಿಡಬಾರದು. ಪಕ್ಷಕ್ಕೆ ದ್ರೋಹ ಮಾಡಿರುವ ರಮೇಶ್‌ ಕುಮಾರ್‌ ಕಾಂಗ್ರೆಸ್‌ ಪಕ್ಷಕ್ಕೆ ಬೇಡ. ಸಚಿವ ನಾಗೇಶ್‌ ಕೂಡಾ ನನಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲೋಕಸಭೆ ಚುನಾವಣೆಯಲ್ಲಿ ಇವರಾರ‍ಯರು ಕಾಂಗ್ರೆಸ್‌ ಪರ ಕೆಲಸ ಮಾಡಲಿಲ್ಲ, ಕಾಂಗ್ರೆಸ್‌ ಸೋಲಿಗೆ ಕಾಂಗ್ರೆಸ್‌ ಶಾಸಕರೇ ಕಾರಣ. ರಮೇಶ್‌ ಕುಮಾರ್‌, ನಜೀರ್‌ ಅಹಮದ್‌, ಎಸ್‌ಎನ್‌.ನಾರಾಯಣಸ್ವಾಮಿ ವಿ.ಮುನಿಯಪ್ಪ ವಿರುದ್ಧ ಕ್ರಮಕ್ಕೆ ಶಿಪಾರಸು ಮಾಡಲಾಗಿದೆ,ರ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.