ಹೊಸಕೋಟೆ (ಅ.27) :  ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ನಗರದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ನೇತೃತ್ವದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಎಂಟಿಬಿ ನಾಗರಾಜ್‌ ಅವರು ಬಿಜೆಪಿ ಪಕ್ಷದ ಶಾಲು ಹೊದಿಸಿ, ಬಾವುಟವನ್ನು ನೀಡುವ ಮೂಲಕ ಜಯಮ್ಮ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು.

ಮನನೊಂದು ಕಾಂಗ್ರೆಸ್‌ಗೆ ರಾಜೀನಾಮೆ

ಪಕ್ಷಕ್ಕೆ ಅದಿಕೃತವಾಗಿ ಸೇರ್ಪಡೆಗೊಂಡ ಜಯಮ್ಮ ಅವರು ತಮ್ಮ ಅಧ್ಯಕ್ಷ ಪದವಿಯ ಅಧಿಕಾರವದಿ ಇನ್ನೂ 7 ತಿಂಗಳುಗಳು ಬಾಕಿ ಇರುವಾಗಲೆ ಕಾಂಗ್ರೆಸ್‌ ಹೈಕಮಾಂಡ್‌ ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿರಂತರವಾಗಿ ಒತ್ತಡ ಹಾಕುತ್ತಿದ್ದರು. ಅದಕ್ಕೆ ನಾನು ಒಪ್ಪದಿದ್ದ ಸಂದರ್ಭದಲ್ಲಿ ನನ್ನ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲು ಯೋಜನೆ ರೂಪಿಸಿದ್ದರು. ಒಬ್ಬ ಪ್ರಾಮಾಣಿಕ ಕಾರ್ಯಕರ್ತಳಾಗಿ ಪಕ್ಷಕ್ಕೆ ದುಡಿದ ನನಗೆ ಕೆಲವು ಪ್ರಭಾವಿಗಳು ಸ್ವಾರ್ಥಕ್ಕಾಗಿ ನನ್ನನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಲು ಒತ್ತಡ ಹಾಕಿದ ಪರಿಣಾಮವಾಗಿ ನನ್ನ ಮನಸ್ಸಿಎ ತೀವ್ರ ನೋವುಂಟು ಮಾಡಿದ ಪರಿಣಾಮ ನನ್ನ ಅಧ್ಯಕ್ಷೆ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದರು.

ಮಹಿಳಾ ಮೀಸಲಿಗೆ ಅವಮಾನ

ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಮಾತನಾಡಿ ಸರ್ಕಾರ ಮಹಿಳೆಯರಿಗಾಗಿ ಶೇ.33ರಷ್ಟುಮೀಸಲಾತಿ ಕಲ್ಪಿಸಿದೆ. ಆದರೆ ಜಿಪಂ ಅಧ್ಯಕ್ಷರಾಗಿ ಅವರ ಅವಧಿ ಇನ್ನು ಏಳು ತಿಂಗಳು ಇರುವಾಗಲೆ ಮೂರು ತಿಂಗಳಿನಿಂದ ಒತ್ತಡ ಹಾಕುವುದರ ಮೂಲಕ ಮಹಿಳಾ ಮೀಸಲಾತಿಗೆ ಅವಮಾನ ಮಾಡಿದ್ದಾರೆ. ಸಮರ್ಥವಾಗಿ ಕೆಲಸ ಮಾಡಲು ಅಡ್ಡಗಾಲು ಹಾಕುತ್ತಿದ್ದ ಕಾಂಗ್ರೆಸ್‌ ಪ್ರಭಾವಿಗಳ ಒತ್ತಡಕ್ಕೆ ಬೇಸತ್ತು ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ಧಾರೆ ಎಂದರು.

'RR ನಗರದಲ್ಲಿ ಅಭಿವೃದ್ಧಿಯಾಗಿದ್ದು ಜನರದ್ದಾ? ಗೆದ್ದು ಹೋದವರದ್ದಾ'? ...

ಜಿಪಂ ಸದಸ್ಯ ಸಿ.ನಾಗರಾಜ್‌, ಬಿಜೆಪಿ ಜಿಲ್ಲಾ ಒಬಿಸಿ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ನಗರಸಭೆ ಸದಸ್ಯ ಅರುಣ್‌(ಹರಿ), ಮುಖಂಡ ಲಕ್ಷ್ಮೇನಾರಾಯಣ ಇದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಜಿಪಂ ಕ್ಷೇತ್ರದಿಂದ, ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾಗಿದ್ದ ಜಯಮ್ಮ, ಸುಮಾರು 5 ಸಾವಿರಕ್ಕೂ ಅದಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಪೂರ್ವ ನಿರ್ಧಾರದಂತೆ ಸೂಲಿಬೆಲೆ ಜಿಪಂ ಕ್ಷೇತ್ರದ ಸದಸ್ಯ ವಿ.ಪ್ರಸಾದ್‌ 30 ತಿಂಗಳ ಅವಧಿ ನಂತರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಯ್ಕೆಯಾಗಿದ್ದರು. ಆದರೆ ಅವಧಿಗೂ ಮುನ್ನವೆ ಕಾಂಗ್ರೆಸ್‌ ಹೈಕಮಾಂಡ್‌ ರಾಜೀನಾಮೆ ನೀಡಲು ಒತ್ತಡ ಹಾಕಿದ ಪರಿಣಾಮ ರಾಜಿನಾಮೆ ನೀಡಿದ್ದಾರೆ.

ಜಯಮ್ಮ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ದೊಡ್ಡಬಳ್ಳಾಪುರದಲ್ಲಿ ಪಕ್ಷ ಸಂಘಟನೆಗೆ ಆನೆಬಲ ಬಂದಂತಾಗಿದೆ. ಬಿಜೆಪಿ ದೇಶದ ಅತಿ ದೊಡ್ಡ ಪಕ್ಷವಾಗಿದ್ದು, ಸಾಮಾನ್ಯ ಕಾರ್ಯಕರ್ತರಿಗೂ ಗೌರವ ನೀಡುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಸಂಘಟನೆ ಆಗಲಿದೆ. ಗ್ರಾಮ ಪಂಚಾಯತ್‌ ಚುನಾವಣೆ ಸಮೀಪ ಇರುವ ಕಾರಣ ತಾಲೂಕಿನಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಒತ್ತು ನೀಡಿ.

ಎಂಟಿಬಿ ನಾಗರಾಜ್‌ ವಿಧಾನ ಪರಿಷತ್‌ ಸದಸ್ಯ