ಬಿಜೆಪಿ ಸರ್ಕಾರಕ್ಕೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದು ಮಾತ್ರ ಗೊತ್ತಿದೆ: ಐವನ್‌ ಡಿಸೋಜ

ಇದು ರಾಜಕೀಯ ಪ್ರೇರಿತ ಸಭೆ ಅಲ್ಲ, ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸುವ ಸಭೆಯಾಗಿದೆ. ದೇಶದ ಜನತೆಯ ಶಾಂತಿ ನಾಶ ಮಾಡಲು ಹೊರಟಿದ್ದಾರೆ: ಐವನ್‌ ಡಿಸೋಜ

Congress Leader Ivan D'Souza Slams BJP grg

ಹೊನ್ನಾವರ(ಅ.08):  ಶೇ.40 ಕಮಿಷನ್‌ ಹೊಡೆಯುವ ಬಿಜೆಪಿ ಸರ್ಕಾರಕ್ಕೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದು ಮಾತ್ರ ಗೊತ್ತಿದೆ. ಅಮಾಯಕ ಪರೇಶ ಮೇಸ್ತ ಹೆಣದ ಮೇಲೆ ರಾಜಕೀಯ ಮಾಡಿದ ಶಾಸಕ, ಸಚಿವ, ಸಂಸದರು ಈ ಸಾವಿನ ಫಲಾನುಭವಿಗಳಾಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್‌ ಡಿಸೋಜ ಟೀಕಿಸಿದರು.

ಪಟ್ಟಣದ ಶರಾವತಿ ವೃತ್ತದಲ್ಲಿ ಶುಕ್ರವಾರ ನಡೆದ ಪರೇಶ ಮೇಸ್ತ ಸಾವಿನ ಕುರಿತಂತೆ ಜನಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಇದು ರಾಜಕೀಯ ಪ್ರೇರಿತ ಸಭೆ ಅಲ್ಲ, ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸುವ ಸಭೆಯಾಗಿದೆ. ದೇಶದ ಜನತೆಯ ಶಾಂತಿ ನಾಶ ಮಾಡಲು ಹೊರಟಿದ್ದಾರೆ. ಇಲ್ಲಿಯ ಸಂಸದ ಅನಂತ ಕುಮಾರ ಹೆಗಡೆ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆ ಎಂದಿದ್ದರು. ಇದು ಜಾತಿ ಆಧರಿತ ಬರ್ಬರ ಹತ್ಯೆ, ಕೊಲೆ ಎಂದು ಬಿಜೆಪಿ ಮುಖಂಡರು ಆ ಸಂದರ್ಭದಲ್ಲಿ ಹೇಳಿದ್ದರು ಎಂದರು.

ಪರೇಶ್ ಮೇಸ್ತಾ ಪ್ರಕರಣಕ್ಕೆ "ಬಿ" ರಿಪೋರ್ಟ್ ಹಿನ್ನೆಲೆ, ಬಿಜೆಪಿ ವಿರುದ್ಧ ಫೀಲ್ಡಿಗಿಳಿದ ಕಾಂಗ್ರೆಸ್ ಮುಖಂಡರು

232 ಅಮಾಯಕ ಯುವಕರಿಗೆ ಮೇಲೆ ರೌಡಿಶೀಟರ್‌ ಹಾಕಿಸಿದ ಖ್ಯಾತಿ ಬಿಜೆಪಿಗಿದೆ. ಸಂಸದ ಅನಂತಕುಮಾರ ಹೆಗಡೆಯಂತಹ ಶತಮೂರ್ಖ ರಾಜಕಾರಣಿ (?) ಈ ದೇಶದಲ್ಲಿ ಮತ್ತೊಬ್ಬರಿಲ್ಲ. ಕೊಮುಗಲಭೆಗೆ ಪ್ರೇರೇಪಿಸುವ ಓರ್ವ ಗ್ರಾಮ ಪಂಚಾಯಿತಿ ಸದಸ್ಯನಾಗಲು ಅರ್ಹನಲ್ಲದ ವ್ಯಕ್ತಿ ಎಂದು ಕಿಡಿ ಕಾರಿದರು. ನೀವು ಜನತೆಯ ಮುಂದೆ ಎಷ್ಟೇ ಡೋಂಗಿ ಮಾಡಿದರೂ ಅದು ಕ್ಷಣಿಕ ಮಾತ್ರವಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಬಿಜೆಪಿಗರು ಅಂದಿನ ಚುನಾವಣೆಯಲ್ಲಿ ರಾಜ್ಯ, ಜಿಲ್ಲೆಯಲ್ಲಿ ಕೋಮು ಗಲಭೆಯ ಕಿಚ್ಚು ಹಚ್ಚಿದ್ದರು. ಈ ಮೂಲಕ ಸಾವಿನ ಮೇಲೆ ರಾಜಕೀಯ ಮಾಡಿ ಶಾಸಕರಾಗಿದ್ದರು. ಸಿಬಿಐ ವರದಿ ನಂತರವಾದರೂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ದೊಂಬಿ ಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ಮಾಡಿದ್ದೀರಿ. ಜನ ಛೀ... ಥೂ... ಎನ್ನುವ ರೀತಿ ಮಾಡಿದ್ದೀರಿ. ಸುಳ್ಳು ಆರೋಪ ಹೊರಿಸಿ ಕಾಂಗ್ರೆಸ್‌ಗೆ ಕಳಂಕ ತರುವ ರೀತಿಯ ವರ್ತನೆ ಮಾಡಿದ್ದೀರಿ. ಬಿಜೆಪಿಗರು ಈಗ ಜನರ ಮುಂದೆ ಬೆತ್ತಲಾಗಿದ್ದಾರೆ ಎಂದರು.

ರೈತರು ಅತಿವೃಷ್ಟಿಯಿಂದ ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿಲ್ಲ. ಶೇ.40 ಕಮಿಷನ್‌ ಆಸೆಗೆ ಸೀಮಿತವಾಗಿದೆ. ತಾವು ಕ್ಷೇತ್ರಕ್ಕೆ ಅನುದಾನ ಎಷ್ಟುತಂದಿರುವೆ ಎಂದು ಧೈರ್ಯವಾಗಿ ಹೇಳುವ ತಾಕತ್ತು ಒಬ್ಬ ಶಾಸಕರಿಗೂ ಇಲ್ಲ ಎಂದು ದೂರಿದರು.

ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ: ಮುಜುಗರಕ್ಕೀಡಾದ ಬಿಜೆಪಿ ಶಾಸಕ

ಜನತೆ ನೆಮ್ಮದಿಯಿಂದ ಬದುಕಬೇಕಾದರೆ ಇಂತಹ ದುಷ್ಟ, ದ್ರೋಹಿಗಳಿಂದ ದೂರ ಇರಬೇಕಾಗಿದೆ ಎಂದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಂದಿನ ಸಂದರ್ಭದಲ್ಲಿ ಶಿರಸಿಯಲ್ಲಿ ಬೆಂಕಿ ಹಚ್ಚಿ ಪ್ರಚೋದನೆಗೆ ಆಗಲು ಕಾರಣರಾಗಿದ್ದರು. ಆದರೆ ಇಂದು ಅದಕ್ಕೆ ಉತ್ತರ ನೀಡಲು ಅಸಾಧ್ಯವಾಗಿದ್ದಾರೆ. ಭಯದ ವಾತಾವರಣ ಸೃಷ್ಟಿಮಾಡಿದ್ದಾದರೂ ಏಕೆ? ಎಂದು ಜನತೆಗೆ ಉತ್ತರಿಸಿ ಎಂದರು.

ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಸತೀಶ್‌ ಸೈಲ್‌, ಜೆ.ಡಿ. ನಾಯ್ಕ, ಮುಖಂಡರಾದ ಮಂಜುನಾಥ ನಾಯ್ಕ, ರತ್ನಾಕರ ನಾಯ್ಕ, ಎಂ.ಎನ್‌. ಸುಬ್ರಹ್ಮಣ್ಯ,ಶಿವಾನಂದ ಹೆಗಡೆ ಕಡತೋಕಾ, ರಮಾನಂದ ನಾಯ್ಕ, ಸುಜಾತಾ ಗಾಂವ್ಕರ, ಜಯಶ್ರೀ ಮೊಗೇರ, ಬಸವರಾಜ ದೊಡ್ಮನಿ, ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ತೆಂಗೇರಿ, ಮಂಕಿ ಬ್ಲಾಕ್‌ ಅಧ್ಯಕ್ಷ ಗೋವಿಂದ ನಾಯ್ಕ ಇದ್ದರು.
 

Latest Videos
Follow Us:
Download App:
  • android
  • ios