*   ಜೆಡಿಎಸ್‌- ಕಾಂಗ್ರೆಸ್‌ನೊಂದಿಗೆ ಒಂದಾಗುತ್ತಾರೆ ಎಂಬ ಆಶಯ ಹಾಗೂ ವಿಶ್ವಾಸ ಇದೆ*   ಸಿದ್ದರಾಮಯ್ಯನವರು ಸ್ವಾಮಿಗಳನ್ನ ಭೇಟಿಯಾಗೋದು ಹೊಸತಲ್ಲ*   ಕೋಡಿ ಮಠದ ಸ್ವಾಮಿಗಳು ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತರು 

ಗದಗ(ಸೆ.12): ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಅನ್ನೋ ತತ್ವ ಸಿದ್ಧಾಂತಕ್ಕೆ ಗೆಲುವಾಗಲಿದ್ದು, ಕಲಬುರಗಿಯಾಗಿರಲಿ ಮತ್ತೊಂದು ಕಡೆ ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂದು ಹಿರಿಯ ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ಹೇಳಿದ್ದಾರೆ.

ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌- ಕಾಂಗ್ರೆಸ್‌ನೊಂದಿಗೆ ಒಂದಾಗುತ್ತಾರೆ ಎಂಬ ಆಶಯ ಹಾಗೂ ವಿಶ್ವಾಸ ಇದೆ. ಮುಂದೆ ಕಾಂಗ್ರೆಸ್‌ ಸರ್ಕಾರ ರಚನೆ ಮಾಡುತ್ತೆ. ಸಿದ್ದರಾಮಯ್ಯನವರು ಸ್ವಾಮಿಗಳನ್ನ ಭೇಟಿಯಾಗೋದು ಹೊಸತಲ್ಲ. ಅನೇಕ ಮಠ ಮಾನ್ಯಗಳಿಗೆ ಸಿಎಂ ಹೋಗುತ್ತಾರೆ. ಗದಗಿನ ಸ್ವಾಮಿಗಳ ಜತೆಗೂ ಶ್ರೇಷ್ಠ ಸಂಬಂಧ ಹೊಂದಿದ್ದರು ಎಂದು ತಿಳಿಸಿದ್ದಾರೆ.

ರಜೆ ನೀಡಲು ಲಂಚ ಕೇಳಿದ ಸಾರಿಗೆ ಅಧಿಕಾರಿ ಅರೆಸ್ಟ್‌

ಕೋಡಿ ಮಠದ ಸ್ವಾಮಿಗಳ ಬಳಿ ಭಕ್ತಿಯಿಂದ ಹೋಗಿರಬಹುದು. ಭವಿಷ್ಯ ಕೇಳಿದರೂ ತಪ್ಪೇನಿಲ್ಲ, ಆ ಸ್ವಾಮಿಗಳ ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತರು ಎಂದು ಹೇಳಿದ್ದಾರೆ.