ಚಿತ್ರದುರ್ಗ (ಅ.25):  ವಿಧಾನಸಭೆ ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದು ಹಾಗಿದ್ರೆ ಅವರು ಮತ್ಯಾಕೆ ಪ್ರಚಾರ ಮಾಡ್ತಾರೆ. 

ಮನೆಗೆ ಹೋಗೋದು ಬಿಟ್ಟು ಮಾಡಬಾರದ್ದನ್ನು ಯಾಕೆ ಮಾಡ್ತಾರೆ ಎಂದು ಮಾಜಿ ಸಚಿವ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಹಾಗೂ ಪರಿಷತ್‌ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ಆ ಪಕ್ಷದ ಧುರೀಣರು ಬೀಗುತ್ತಿದ್ದಾರೆ. ಹೆಣದ ಮೇಲೆ ರಾಜಕಾರಣ ಮಾಡುವ ಗುಣ ಬಿಜೆಪಿಯದ್ದಾಗಿದ್ದು, ಆ ಕಾರಣಕ್ಕಾಗಿ ಕೋವಿಡ್‌ ವ್ಯಾಕ್ಸಿನ್‌ ನೆಪದಲ್ಲಿ ಮುಗ್ಧ ಜನರ ಮನವೊಲಿಕೆಗೆ ಯತ್ನಿಸುತ್ತಿದೆ ಎಂದರು.

ಡಿಕೆಶಿ ಎಲೆಕ್ಷನ್ ಗೆಲ್ಲಲು ಗೂಂಡಾಗಿರಿ ಮಾಡ್ತಿದ್ದಾರೆ : ಗಂಭೀರ ಆರೋಪ

ಕಾಂಗ್ರೆಸ್‌ ಎಂದಿಗೂ ಗೂಂಡಾಗಿರಿ ಮಾಡಿಲ್ಲ. ಗೂಂಡಾಗಿರಿ ನಮ್ಮ ಜಾಯಮಾನವಲ್ಲ. ಗೂಂಡಾಗಿರಿಗೆ ಡೆಫಿನೇಷನ್‌ ಬಿಜೆಪಿಯವರೇ ನೀಡಬೇಕೆಂದು ಪರಮೇಶ್ವರ ಹೇಳಿದರು.