ಯೋಗೇಶ್ವರ್ ಒಬ್ಬ ಮೋಸಗಾರ : ಡಿಕೆ ಸುರೇಶ್
- ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅವರು ಮೋಸಗಾರ
- ಮೋಸಗಾರ ಎಂದು ಸಂಬೋಧಿಸಿ ಸಂಸದ ಡಿಕೆ ಸುರೇಶ್ ವಾಗ್ದಾಳಿ
- ಜನರು ಅವರನ್ನು ಮೋಸಗಾರ ಎಂದು ಕರೆಯುತ್ತಾರೆ -ಸುರೇಶ್
ರಾಮನಗರ (ಜು.11): ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಮೋಸಗಾರ ಎಂದು ಸಂಬೋಧಿಸಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.
ಶನಿವಾರ ರಾಮನಗರದಲ್ಲಿ ಬಿಜೆಪಿಗೆ ಎಲ್ಲಿಂದಲೋ ಬಂದವರು ಹಾಗೂ ಜೈಲಿಗೆ ಹೋಗಿ ಬಂದವರನ್ನು ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಯೋಗೇಶ್ವರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸುರೇಶ್ ಜನರು ಅವರನ್ನು ಮೋಸಗಾರ ಎಂದು ಕರೆಯುತ್ತಾರೆ. ಅಂತಹವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಬೇಕಾಗಿಲ್ಲ. ಜನರು ಏಕೆ ಈ ರೀತಿ ಕರೆಯುತ್ತಾರೆ ಎಂದು ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಿ ಎಂದರು.
ಸಚಿವ ಯೋಗೇಶ್ವರ್ ವಿರುದ್ಧ ಸ್ವಪಕ್ಷೀಯರಿಂದಲೇ ವಾಗ್ದಾಳಿ! .
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯವರಿಗೆ ಮಾಡಲು ಬೇರೇನೂ ಕೆಲಸ ಇಲ್ಲ. ಇದನ್ನೇ ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯತ್ನಾಳ್ ಭೇಟಿ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಹಿರಿಯ ನಾಯಕನ ಭೇಟಿಯಾದ ಯೋಗೇಶ್ವರ್ ..
ಬೇರೆಯವರ ಹೆಗಲ ಮೇಲೆ ಕೈ ಹಾಕಿದರ ಸಂಬಂಧ ಇದೆ ಎನ್ನುತ್ತಾರೆ. ಯಾರೋ ಒಬ್ಬರು ಬಂದು ಹೆಗಲ ಮೇಲೆ ಕೈ ಹಾಕುವಾಗ ಏನು ಮಾಡಬೇಕಂತ ನೀವೇ ಹೇಳಬೇಕು. ಸಾರ್ವಜನಿಕ ಜೀವನದಲ್ಲಿ ಕೆಲವೊಮ್ಮೆ ಇಂತಹ ಘಟನೆಗಳು ಘಟಿಸುತ್ತವೆ. ಸರಿ ಮಾಡಿಕೊಳ್ಳಬೇಕು ಎಂದರು.