Asianet Suvarna News Asianet Suvarna News

ನಾನು ತಪ್ಪು ಮಾಡಿದ್ರೆ ಈಗಲೂ ಜೈಲಿಗೆ ಹಾಕಲಿ

ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. 

Congress Leader DK Shivakumar inaugurated vokkaliga Bhavan in Ramanagara
Author
Bengaluru, First Published Dec 26, 2019, 2:38 PM IST

ರಾಮನಗರ (ಡಿ.26): ನಾನು ರಾಜ​ಕಾ​ರಣ ಮತ್ತು ವ್ಯವ​ಹಾ​ರ​ವನ್ನು ಹಸ​ನಾಗಿ ಮಾಡಿ​ದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಲೂಟಿ ಹೊಡೆ​ದಿಲ್ಲ. ನಾನು ತಪ್ಪು ಮಾಡಿದ್ರೆ ಈಗಲೂ ಜೈಲಿಗೆ ಹಾಕಲಿ ಕಾಂಪ್ರು​ಮೈಸ್‌ ಮಾಡಿ​ಕೊ​ಳ್ಳುವ ಜಾಯ​ಮಾನ ನನ್ನ​ದಲ್ಲ ಎಂದು ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಹೇಳಿ​ದರು.

ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯ ರಾಮನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಲಾಗಿರುವ ‘ಒಕ್ಕಲಿಗ ಭವನ’ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅವ​ಮಾನ ಆಗಿಲ್ಲ:  ತಿಹಾರ್‌ ಜೈಲಿಗೆ ಹೋಗಿ ಬಂದಿ​ದ್ದ​ರಿಂದ ನನಗೆ ಅವ​ಮಾನ ಆಗಿಲ್ಲ. ನಾನು ತಪ್ಪನ್ನೇ ಮಾಡಿಲ್ಲ. ಹೀಗಿ​ರು​ವಾಗ ನಾನೇಕೆ ಎದೆ​ಗುಂದಲಿ. ಯಾರು ಏನೇ ಮಾಡಲಿ, ಯಾವ ರೂಪದಲ್ಲಿ ಬೇಕಾದರೂ ಕಿರುಕುಳ ನೀಡಲಿ, ಈ ದಿಕ್ಕಿನಲ್ಲಿ ಯಾವುದೇ ರಾಜಿ ಇಲ್ಲದೆ, ನನ್ನ ಕ್ಷೇತ್ರ ಹಾಗೂ ನನ್ನ ಜನಾಂಗದ ಸಮಗ್ರಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.

ನನ್ನ ರಾಜಕೀಯ ಬದುಕಾಗಲಿ, ಸಾರ್ವಜನಿಕ ಜೀವನವಾಗಲಿ, ವಹಿವಾಟು-ವ್ಯವಹಾರಗಳಾಗಲಿ ಎಲ್ಲವೂ ಹಸನಾಗಿವೆ. ಕಾನೂನು ಮೀರಿ ಯಾವುದೇ ವ್ಯವಹಾರ ಮಾಡಿಲ್ಲ. ನಾನು ತಪ್ಪು ಮಾಡಿದರೆ ಶಿಕ್ಷೆಯಾಗಲಿ ಎಲ್ಲದಕ್ಕೂ ನಾನು ಸಿದ್ಧನಿದ್ದೇನೆ. ಎಂಥದ್ದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ, ಕಾಯ್ದೆಗಳು ದುರು​ಪ​ಯೋಗ ಆಗು​ತ್ತಿ​ರು​ವು​ದಕ್ಕೆ ಬೇಸ​ರ​ವಿದೆ ಎಂದು ಹೇಳಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸಾಕಷ್ಟುಷಡ್ಯಂತ್ರ ನಡೆ​ದಿತ್ತು. ಕಾನೂ​ನನ್ನು ದುರು​ಪ​ಯೋಗ ಮಾಡಿ​ಕೊ​ಳ್ಳ​ಲಾ​ಗು​ತ್ತಿತ್ತು. ನಾನು ಕಷ್ಟ​ದ​ಲ್ಲಿ​ದ್ದಾಗ ಒಕ್ಕ​ಲಿಗ ಸಮಾಜ ಬೆನ್ನಿಗೆ ನಿಂತಿತ್ತು. ಒಕ್ಕ​ಲಿ​ಗರು ಮಾತ್ರ​ವ​ಲ್ಲದೆ ಎಲ್ಲಾ ಸಮು​ದಾ​ಯ​ಗಳ ಪ್ರಾರ್ಥ​ನೆಯ ಫಲ​ವಾಗಿ ನಿಮ್ಮೆ​ಲ್ಲರ ಮುಂದೆ ನಿಂತಿ​ದ್ದೇ​ನೆ. ನಿಮ್ಮೆ​ಲ್ಲರ ಪಾದ​ಗ​ಳಿಗೆ ನನ್ನ ನಮಸ್ಕಾರ ಎಂದು ಕೃತ​ಜ್ಞತೆ ಸಲ್ಲಿ​ಸಿ​ದ​ರು.

ಶಿರಾ ತಾಲೂಕು ಸ್ಫಟಿ​ಕ​ಪುರಿ ಮಹಾ​ಸಂಸ್ಥಾನ ಮಠದ ಪೀಠಾ​ಧ್ಯಕ್ಷ ನಂಜಾ​ವ​ಧೂತ ಮಹಾ​ಸ್ವಾ​ಮೀಜಿ ಮಾತ​ನಾಡಿ, ಪ್ರಧಾನಿ ಮೋದಿ ಅವ​ರಿಗೆ ಡಿ.ಕೆ.​ಶಿ​ವ​ಕು​ಮಾರ್‌ ಮೇಲೆ ಬಲು ಪ್ರೀತಿ ಇದೆ. ಹಾಗಾ​ಗಿಯೇ ಅವ​ರಿಗೆ ತೊಂದರೆ ನೀಡಿ, ಒಕ್ಕ​ಲಿ​ಗರು ಒಂದೆಡೆ ಸೇರಿ​ಸುವ ಕೆಲಸ ಮಾಡಿ​ದರು ಎಂದು ಪರೋ​ಕ್ಷ​ವಾಗಿ ಟೀಕಿ​ಸಿ​ದರು.

ಸುರೇಶ್‌ ಶ್ರಮ:  ಡಿ.ಕೆ. ​ಶಿ​ವ​ಕು​ಮಾರ್‌ ಸಂಕ​ಷ್ಟ​ದಲ್ಲಿ ಸಿಲು​ಕಿ​ದಾಗ ಅವರ ಬಿಡು​ಗ​ಡೆ​ಗಾಗಿ ಸಹೋ​ದರ ಡಿ.ಕೆ. ಸು​ರೇಶ್‌ ಹಗ​ಲಿ​ರಳು ಶ್ರಮಿ​ಸಿ​ದರು. ರಾಮ​ನ ನೆರ​ವಿಗೆ ಲಕ್ಷ್ಮ​ಣ ನಿಂತಿ​ದ್ದನ್ನು ನಾವೆ​ಲ್ಲರು ಕೇಳಿ​ದ್ದೇವೆ. ಆದರೆ, ಡಿ.ಕೆ.​ಸು​ರೇಶ್‌ ತನ್ನ ಸಹೋ​ದರನ ವಿಚಾ​ರ​ದಲ್ಲಿ ಲಕ್ಷ್ಮ​ಣ​ಗಿಂತಲೂ ಹತ್ತು ಹೆಜ್ಜೆ ಮುಂದಿದ್ದರು. ಜನ ಸೇವೆ​ಯನ್ನೇ ಹವ್ಯಾಸ ಮಾಡಿ​ಕೊಂಡಿ​ರುವ ಸುರೇಶ್‌ ರಾಷ್ಟ್ರ ಕಂಡ ಮಾದರಿ ಲೋಕ​ಸಭಾ ಸದಸ್ಯ ಎಂದು ಬಣ್ಣಿ​ಸಿ​ದರು.

ಚುಂಚ​ನ​ಗಿರಿ ಮಠದ ಶ್ರೀ ನಿರ್ಮ​ಲಾ​ನಂದನಾಥ ಸ್ವಾಮೀಜಿ ಮಾತ​ನಾಡಿ, ಈಗೀಗ ಡಿ.ಕೆ.​ಶಿ​ವ​ಕು​ಮಾರ್‌ ಅವರು ಆಧ್ಯಾ​ತ್ಮಿ​ಕ​ವಾಗಿ ಬಹಳ ಮಾತ​ನಾ​ಡು​ತ್ತಿ​ದ್ದಾರೆ. ಅವರು ಅನು​ಭ​ವಿ​ಸಿದ ಕಷ್ಟ​ಗ​ಳನ್ನು ನೋಡಿ​ದ್ದೇವೆ. ಮನುಷ್ಯ​ನಿಗೆ ಜೀವ​ನ​ದಲ್ಲಿ ಕಷ್ಟ​ಗಳು ಬರು​ತ್ತವೆ. ನಡೆ​ಯು​ವ​ವರು ಎಡ​ವು​ತಾ​ರೆಯೇ ಹೊರತು ಕುಳಿ​ತ​ವ​ರಲ್ಲ ಎಂದು ಹೇಳಿ​ದರು.

Follow Us:
Download App:
  • android
  • ios