ಕೇವಲ ನಟಿಯರ ಮೇಲೆ ತನಿಖೆ ಆಗುತ್ತಿರುವ  ಡ್ರಗ್ ಕೇಸ್‌ನಲ್ಲಿ ಯಾಕೆ ಹೀರೋಗಳ ಮೇಲೆ  ತನಿಖೆ ಆಗುತ್ತಿಲ್ಲ ಎಂದು ಮುಖಂಡರೋರ್ವರು ಪ್ರಶ್ನೆ ಮಾಡಿದ್ದಾರೆ

ಮಡಿಕೇರಿ (ಅ.05): ರಾಜ್ಯದಲ್ಲಿ ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಭಾಗಿಯಾಗಿದ್ದರೂ ಒಳಗೆ ಹೋಗಲಿ. ಸಿಎಂ, ಸಚಿವರು ಯಾರೇ ಆಗಲಿ ತಪ್ಪು ಮಾಡಿದ್ದರೆ ಎಲ್ಲರ ಮೇಲೂ ಕ್ರಮ ಆಗಬೇಕು ಎಂದು ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಆಗ್ರಹಿಸಿದ್ದಾರೆ. 

ಮಡಿಕೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀರೋಯಿನ್‌ಗಳ ಮೇಲೆ ಮಾತ್ರ ಟಾರ್ಗೆಟ್‌ ಮಾಡಲಾಗುತ್ತಿದೆ. ಬಾಲಿವುಡ್‌ನಲ್ಲೂ ಹೀರೋಯಿನ್‌ಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಆದರೆ, ಹೀರೋಗಳ ಮೇಲೆ ಯಾಕೆ ತನಿಖೆ ಆಗ್ತಿಲ್ಲ? ಪ್ರಕರಣ ಮುಚ್ಚಿ ಹಾಕಲು ಯಾರೋ ಪ್ರಯತ್ನಿಸುತ್ತಿರುವ ಅನುಮಾನ ಇದೆ. ಅಧಿ​ಕಾರಿಗಳು ಸರಿಯಾಗಿ ತನಿಖೆ ಮಾಡದಿದ್ದರೆ ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದರು.

ಅನುಶ್ರೀ ಹಿಂದಿರುವ ಶುಗರ್ ಡ್ಯಾಡಿ, ಮಾಜಿ ಸಿಎಂ ಯಾರು?..

ಉತ್ತರ ಪ್ರದೇಶದಲ್ಲಿ ಯುವತಿ ಅತ್ಯಾಚಾರ, ಕೊಲೆ ಪ್ರಕರಣದ ವಾಸ್ತವಾಂಶವನ್ನು ಪೊಲೀಸರು ಮುಚ್ಚಿ ಹಾಕುತ್ತಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ​, ಪ್ರಿಯಾಂಕ ಗಾಂ​ಧಿ, ಮಾಧ್ಯಮದವರನ್ನು ತಡೆಯಲಾಗಿತ್ತು ಎಂದು ಆರೋಪಿಸಿದರು.