Asianet Suvarna News Asianet Suvarna News

ಯಡಿಯೂರಪ್ಪ ನಂತ್ರ ಬಸನಗೌಡ ಪಾಟೀಲ ಯತ್ನಾಳ ಸಿಎಂ?

ಯಡಿಯೂರಪ್ಪ ನಂತರ ಯತ್ನಾಳ ಮುಖ್ಯಮಂತ್ರಿ ಗಾದಿ ಏರಿದರೂ ಅಚ್ಚರಿಪಡಬೇಕಿಲ್ಲ| ಗುರು​ನ​ಮನ ಹಾಗೂ ಅಭಿನಂದನಾ ಸಮಾ​ರಂಭ​ದಲ್ಲಿ ಕಾಂಗ್ರೆಸ್‌ ಮುಖಂಡ ಅಸಗೋಡು ಜಯಸಿಂಹ| ಯತ್ನಾಳ ನೇರ ನುಡಿಯ ನಾಯಕ. ಅವರಲ್ಲಿ ದಿ. ಆರ್‌. ಗುಂಡೂರಾವ್‌ ಅವರನ್ನು ಕಾಣಬಹುದು| 

Congress Leader Asagodu Jayasinha Talks Over MLA Basanagouda Patil Yatnal
Author
Bengaluru, First Published Mar 12, 2020, 2:47 PM IST

ವಿಜಯಪುರ(ಮಾ.12): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಂತರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮುಖ್ಯಮಂತ್ರಿ ಗಾದಿ ಏರಿದರೂ ಅಚ್ಚರಿಪಡಬೇಕಿಲ್ಲ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಅಸಗೋಡು ಜಯಸಿಂಹ ಹೇಳಿದ್ದಾರೆ.

ನಗರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ಬ್ರಾಹ್ಮಣ ಸಮಾಜದ ವತಿಯಿಂದ ನಡೆದ ಗುರುನಮನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯತ್ನಾಳ ಅವರು ನೇರ ನುಡಿಯ ನಾಯಕ. ಅವರಲ್ಲಿ ದಿ. ಆರ್‌. ಗುಂಡೂರಾವ್‌ ಅವರನ್ನು ಕಾಣಬಹುದಾಗಿದೆ. ಬಿ.ಎಸ್‌. ಯಡಿಯೂರಪ್ಪ ಅವರ ನಂತರ ಮುಖ್ಯಮಂತ್ರಿ ಗಾದಿ ಏರಿದರೂ ಅಚ್ಚರಿಪಡಬೇಕಿಲ್ಲ. ಇದ್ದ ವಿಷಯವನ್ನು ನೇರವಾಗಿ ಮಾತನಾಡುವ ಮನುಷ್ಯ ಯತ್ನಾಳ. ಅವರಲ್ಲಿ ಮುಂಗೋಪ ಸ್ವಭಾವ ಇದೆ. ಆದರೆ ಜನಹಿತಕ್ಕೆ ಯತ್ನಾಳ ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್‌ ಇದ್ದಂತೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕ ಯತ್ನಾಳ ಅವರು ಬ್ರಾಹ್ಮಣ ಸಮಾಜದ ಯುವ ಮುಖಂಡನಿಗೆ ವಿಡಿಎ ಪಟ್ಟ ದೊರಕಿಸಿಕೊಟ್ಟಿದ್ದಾರೆ. ಕೇಂದ್ರದ ಮಾಜಿ ಸಚಿವರಾಗಿದ್ದವರು. ಯತ್ನಾಳ ಖಂಡಿತವಾಗಿಯೂ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಮುಂಗೋಪಿ ಎನ್ನಬಹುದಾದರೂ, ಜನಹಿತದ ಕಾರ್ಯಕ್ಕೆ ಮುಂಗೋಪ ಸ್ವಭಾವ ತಪ್ಪೇನಲ್ಲ ಎಂದರು.

ಬ್ರಾಹ್ಮಣ ಸಮಾಜದ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಮೀಸಲಾತಿ ವ್ಯವಸ್ಥೆ ಅನುಷ್ಠಾನಗೊಳಿಸಬೇಕು. ಪ್ರಭಾವಿ ನಾಯಕರಾಗಿರುವ ಯತ್ನಾಳ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದರು.
ಬ್ರಾಹ್ಮಣರು ನಿಂತ ನೀರಲ್ಲ, ಹರಿಯುವ ನೀರು, ಬ್ರಾಹ್ಮಣ ಸಮಾಜ ಇನ್ನೊಂದು ಸಮಾಜದವರನ್ನು ಮೇಲೆತ್ತುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸ್ವಾಭಿಮಾನದಿಂದ ಇನ್ನೊಬ್ಬರಿಗೆ ಮೇಲೆತ್ತುವ ಶಕ್ತಿ ಬ್ರಾಹ್ಮಣ ಸಮಾಜಕ್ಕಿದೆ. ಬ್ರಾಹ್ಮಣ ಸಮಾಜ ಎಂದಿಗೂ ಜಾತಿ ನೋಡಿಲ್ಲ, ಕನಕದಾಸರಲ್ಲಿದ್ದ ಅನುಪಮ ಭಕ್ತಿಯಿಂದಾಗಿ ವ್ಯಾಸರಾಯರು ಕನಕದಾಸರನ್ನು ಬೆಳೆಸಿದರು ಎಂದರು.

ಸಾನ್ನಿಧ್ಯ ವಹಿಸಿದ್ದ ಪೇಜಾವರ ಅಧೋಕ್ಷಜ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ವೀರಘಟ್ಟ-ಹುಣಸಿಹೊಳಿ ಶ್ರೀ ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದಂಗಳವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.

ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ, ಪಂ.ಸತ್ಯಧಾನಾಚಾರ್ಯ ಕಟ್ಟಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ವಾಮನಾಚಾರ್ಯ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶ್ರೀಕೃಷ್ಣ ಸಂಪಗಾಂವಕರ, ಶೈಲಜಾ ಪಾಟೀಲ ಯತ್ನಾಳ, ಶ್ರೀನಿವಾಸ ಬೆಟಗೇರಿ, ಆನಂದ ಜೋಶಿ, ಕೃಷ್ಣ ಗುನ್ನಾಳಕರ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ ಮುಂತಾದವರು ಇದ್ದರು.
 

Follow Us:
Download App:
  • android
  • ios