ಬೆಂಗಳೂರು [ಅ.02]:  ಕಾಂಗ್ರೆಸ್‌ ಮೇಯರ್‌ ಅಭ್ಯರ್ಥಿ ಪರ ಜೆಡಿಎಸ್‌ನ 8 ಸದಸ್ಯರು ಮತ ನೀಡದ ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲಿ 4 ವರ್ಷ ಮೈತ್ರಿ ಮುರಿದುಕೊಳ್ಳುವುದಕ್ಕೆ ಕಾಂಗ್ರೆಸ್‌ ನಿರ್ಧರಿಸಿದೆ. 

ಈ ಕುರಿತು ಬಿಬಿಎಂಪಿ ಕಾಂಗ್ರೆಸ್‌ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ವರದಿ ನೀಡಿ ಜೆಡಿಎಸ್‌ನೊಂದಿಗೆ ದೋಸ್ತಿ ಕೊನೆಗೊಳಿಸುವುದಕ್ಕೆ ಮನವಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಾರಿ ಅಧಿಕಾರ ಹಿಡಿಯುವುದು ಅಸಾಧ್ಯ ಎಂದು ತಿಳಿಯುತ್ತಿದ್ದಂತೆ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಆರ್‌.ಸಿ.ಮನೋಹರ್‌, ರಮೇಶ್‌ಗೌಡ, ಮಾಜಿ ಉಪ ಮೇಯರ್‌ ಆನಂದ್‌, ಸದಸ್ಯರಾದ ಮಹದೇವ್‌, ಉಪ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಂಗಮ್ಮ ಸೇರಿದಂತೆ ಒಟ್ಟು 8 ಮಂದಿ ಜೆಡಿಎಸ್‌ ಸದಸ್ಯರು ತಟಸ್ಥರಾದರು. ಇತ್ತ ಜೆಡಿಎಸ್‌ ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ, ಕೆ.ದೇವದಾಸ್‌ ಚುನಾವಣೆ ಬಹಿಷ್ಕರಿಸಿದರು. ಹಾಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಸೋತರು. ಬಿಬಿಎಂಪಿ ಮಟ್ಟದಲ್ಲೂ ಮೈತ್ರಿಗೆ ತಿಲಾಂಜಲಿ ಹಾಕಲು ನಿರ್ಧರಿಸಿದ್ದಾರೆ.