ಮಗ ಮಾತ್ರ ಚೆನ್ನಾಗಿರಬೇಕು ಅಂದರೆ ಹೇಗೆ ? ಅಳಿಯನು ಕೂಡ ಚೆನ್ನಾಗಿರಬೇಕು ಅಲ್ವೇ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jul 2018, 7:47 PM IST
Congress EX MLA A Manju hit out at CM Kumaraswamy
Highlights

  • ನಾನೊಬ್ಬ ಕಾಂಗ್ರೆಸ್ಸಿಗನಾಗಿ ತುಂಬಾನೇ ನೋವಾಗಿದೆ. ಈ ರೀತಿಯ ಹೇಳಿಕೆಗಳು ಸರಿ ಇಲ್ಲ - ಎ ಮಂಜು ವಿಷಾದ
  • ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರೋ  ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲವೆಂದು ಆಕ್ರೋಶ

ಮೈಸೂರು[ಜು.16]: ಮಗ ಮಾತ್ರ ಚೆನ್ನಾಗಿರಬೇಕು ಅಂದರೆ ಹೇಗೆ.? ಮದುವೆ ಮಾಡಿಕೊಟ್ಟ ಅಳಿಯನು ಕೂಡ ಚೆನ್ನಾಗಿರಬೇಕು ಅಲ್ವೇ.? ಹೀಗಂತಾ  ಮೈಸೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮಾಜಿ ಸಚಿವ ಎ.ಮಂಜು ಟಾಂಗ್​ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಬೀಗರ ಸಂಬಂಧಕ್ಕೆ ಹೋಲಿಸಿದ ಮಂಜು, ಕೇವಲ  ಕುಮಾರಸ್ವಾಮಿ ಮಾತ್ರ ಕಷ್ಟ ಪಡುತ್ತಿಲ್ಲ. ದೇವೇಗೌಡರೇ ಅಳಿಯ ಕೂಡ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಮಗ ಮಾತ್ರ ಕಷ್ಟಪಡುತ್ತಿದ್ದಾನೆ ಅನ್ನೊದು ಎಷ್ಟರಮಟ್ಟಿಗೆ ಸರಿ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕಿದೆ‌. ಆದರೆ ಕಾಂಗ್ರೆಸ್‌ಗೆ ಟಾಂಗ್ ಕೊಡುವಂತೆ ರೀತಿಯಲ್ಲಿ ಮಾತಾಡಿದ್ದು ನೋವುಂಟು ಮಾಡಿದೆ ಎಂದರು.

ನಾನೊಬ್ಬ ಕಾಂಗ್ರೆಸ್ಸಿಗನಾಗಿ ತುಂಬಾನೇ ನೋವಾಗಿದೆ. ಈ ರೀತಿಯ ಹೇಳಿಕೆಗಳು ಸರಿ ಇಲ್ಲ. ನಿಮ್ಮ ಪಕ್ಷ ಬೆಳೆಯಬೇಕು ಎಂಬ ಆಸೆಯಂತೆ. ನಮ್ಮ ಪಕ್ಷವೂ ಬೆಳೆಯಬೇಕೆಂಬ ಆಸೆಯಿದೆ ಎಂದು ಎ.ಮಂಜು ಗುಡುಗಿದರು. 

ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿರುವಂತೆ ನಾವು  ಅವರಿಗೆ ವಿಷ ಕೊಟ್ಟಿಲ್ಲ. ಅವರು ಕೇಳಿದ ಪ್ರಮುಖ ಖಾತೆಗಳನ್ನೇ ಕೊಟ್ಟಿದ್ದೇವೆ. ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರೋ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

loader