ಬಳ್ಳಾರಿ(ಜ.18): ‌ಪ್ರಚೋದನಕಾರಿ ಭಾಷಣ ಹಿನ್ನಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಮತ್ತೆ ಕಾಂಗ್ರೆಸ್ ನಾಯಕರ ಆಕ್ರೋಶ ವ್ಯಕ್ತವಾಗಿದೆ. ಶಾಸಕ ಸೋಮಶೇಖರ ರೆಡ್ಡಿ ಅವರನ್ನ ಬಂಧಿಸುವಂತೆ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಗ್ರೆಸ್ ನಿಯೋಗ ಮತ್ತೊಮ್ಮೆ ದೂರು ನೀಡಿದೆ. 

‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’

ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ನೇತೃತ್ವದ ನಿಯೋಗ ಭೇಟಿ ಮಾಡಿ ಸೋಮಶೇಖರ ರೆಡ್ಡಿ ಬಂಧಿಸುವಂತೆ ದೂರು ನೀಡಿದೆ. 

ಜನವರಿ 3 ರಂದು ಘಟನೆ ನಡೆದಿದೆ. ಆದರೆ, ಇನ್ನೂ ಸೋಮಶೇಖರ ರೆಡ್ಡಿ  ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹಂಪಿ ಉತ್ಸವದ ಬಳಿಕ ಕ್ರಮ ಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ‌ಆದರೆ ಈವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ ಆಕ್ರೋಶ ಭರಿತವಾದ ಕಾಂಗ್ರೆಸ್ ನಿಯೋಗದಿಂದ ಮತ್ತೊಮ್ಮೆ ದೂರು ನೀಡಿದೆ. 

ಬಳ್ಳಾರಿಯಲ್ಲಿ ಜಮೀರ್ ಸೇರಿ 30ಕ್ಕೂ ಹೆಚ್ಚು ಮಂದಿ ಬಂಧನ

ಸೋಮಶೇಖರ್ ರೆಡ್ಡಿಯವರನ್ನು ಬಂಧಿಸಿ ಇಲ್ಲಾ ಅಂದರೆ ಮತ್ತೊಮ್ಮೆ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಸೋಮಶೇಖರ ರೆಡ್ಡಿ ಬೆನ್ನಿಗೆ ‌ನಿಂತಿದೆ. ಹೀಗಾಗಿ ಬಂಧಿಸುತ್ತಿಲ್ಲ ಎಂದು ಕಾಂಗ್ರೆಸ್‌ ನಿಯೋಗ ಆರೋಪಿಸಿದೆ. ಸೋಮಶೇಖರ್ ರೆಡ್ಡಿಯವರನ್ನು ಕೂಡಲೇ ಬಂಧಿಸಬೇಕು ಪಟ್ಟು ಹಿಡಿದು ಕಾಂಗ್ರೆಸ್‌ ಮುಖಂಡರು ಎಸ್.ಪಿ ಕಚೇರಿಯಲ್ಲಿ ಕುಳಿತುಕೊಂಡಿದ್ದಾರೆ.