ಮದ್ದೂರು (ಏ.03): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ಸತ್ಯಾತ್ಯತೆ ಯಾವುದೇ ಕಾರಣಕ್ಕೂ ಹೊರಬೀಳುವುದಿಲ್ಲ ಎಂದು ಶಾಸಕ ಕೆ. ಸುರೇಶ್ ಗೌಡ ಹೇಳಿದರು. 

ಪತ್ರಕರ್ತರೊಂದಿಗೆ ಮಾತನಾಡಿದ ಅವರ ಬಿಜೆಪಿ ಕಾಂಗ್ರೆಸ್ ಪಕ್ಷಗಳ ಒಳೊಪ್ಪಂದದ ಪ್ರಕಾರವೇ ಸಚಿವ ರಮೇಶ್‌ ಜಾರಕಿಗೊಳಿ ರಾಜೀನಾಮೆ ಪ್ರಹಸನ ಮುಗಿದಿದೆ. ಈ ಬಗ್ಗೆ ಯಾವುದೇ ತನಿಖೆ ನಡೆಸಿದರು ಸತ್ಯಾಂಶ ಹೊರಬರುವುದಿಲ್ಲ ಎಂದು ಸುರೇಶ್ ಗೌಡ ಹೇಳಿದರು.

ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 9 ಸಾವಿರ ಕೋಟಿ  ರು. ಹಣ ಬಿಡುಗಡೆ ಮಾಡಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು ಹಣಕಾಸು ಇಲಾಖೆ  ಇಲಾಖೆ ಅನುಮೋದನೆಯಾಗಿದ್ದ ಕೆಲಸಗಳನ್ನ  ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? .

ನಾಗಮಂಗಲ ವಿಧಾನ ಸಭಾ ಕ್ಷೇತ್ರದ 700 ಕೋಟಿ ರು. ಅನುದಾನ ನೆನೆಗುದಿಗೆ ಬಿದ್ದದೆ.  ಲೋಕೋಪಯೋಗಿ  ಇಲಾಖೆ ಹೊರತು ಪಡಿಸಿ ನೀರಾವರಿ  ಗೃಹ ನಿರ್ಮಾಣ, ಗ್ರಾಮೀಣಾಭಿವೃದ್ಧಿ ಮತ್ತಿತರ ಇಲಾಖೆಯ  ಕಾಮಗಾರಿಗಳ ಆಸೆಗೆ ತಣ್ಣೀರೆರಚಚಿದ್ದಾರೆಂದು ಆರೋಪಿಸಿದರು. 

ಈ ಸಂಬಂಧ ವಿಧಾನಸಭೆಯಲ್ಲಿ ಜಿಲ್ಲೆಯ ಶಾಸಕರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಡೆಯಲಾಗಿದೆ. 

ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡದೇ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.