ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಜೆಡಿಎಸ್‌ ಸೇರ್ಪಡೆ

ಟಿ. ನರಸೀಪುರ ತಾಲೂಕು ಮೂಗೂರು ಹೋಬಳಿಯ ಕೊತ್ತೇಗಾಲ ಗ್ರಾಮದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಜೆಡಿಎಸ್‌ ಸೇರಿದರು.

Congress and BJP leaders join JDS snr

ಮೂಗೂರು: ಟಿ. ನರಸೀಪುರ ತಾಲೂಕು ಮೂಗೂರು ಹೋಬಳಿಯ ಕೊತ್ತೇಗಾಲ ಗ್ರಾಮದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಜೆಡಿಎಸ್‌ ಸೇರಿದರು.

ಶಾಸಕ ಎಂ. ಅಶ್ವಿನ್‌ಕುಮಾರ್‌ ಅವರ ಸಮ್ಮುಖದಲ್ಲಿ ಮಹೇಶ್‌, ರಮೇಶ, ನಂಜುಂಡಸ್ವಾಮಿ, ನಟರಾಜು, ಬಸವರಾಜು, ಸುರೇಶ, ನವೀನ, ಮಹೇಶ, ಚಿನ್ನಸ್ವಾಮಿ, ಚಿಕ್ಕ ಮಹದೇವಗೌಡ, ಶಿವ ಮಲೇಗೌಡ, ಮಹದೇವಶೆಟ್ಟಿ, ನಂಜುಂಡ ಶೆಟ್ಟ, ಬಸವರಾಜು, ಮಹದೇವಸ್ವಾಮಿ ಮೊದಲಾದವರು ಸೇರಿದರು.

ಈ ವೇಳೆ ಜೆಡಿಎಸ್‌ ಾ್ಲ ಉಪಾಧ್ಯಕ್ಷ ಕೆ.ಸಿ. ವೀರೇಶ್‌, ತಾಲೂಕು ಕ್ಷೇತ್ರ ಅಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ಎಸ್‌ಸಿ ಘಟಕದ ಅಧ್ಯಕ್ಷ ಮಹದೇವ ಜೈಪಾಲ್‌ ಭರಣಿ, ಶಿವಮೂರ್ತಿ, ನಾಗರಾಜು, ಪ್ರಭುಸ್ವಾಮಿ, ರಮೇಶ, ಪ್ರಕಾಶ್‌ಬಾಬು, ಜಗಪತಿ, ಕನ್ನಹಳ್ಳಿ ಶಿವಕುಮಾರ್‌,ಕಾಂತ ಮೊದಲಾದವರು ಇದ್ದರು.

ನನ್ನ ಬೆಂಬಲಿಗರು ನನ್ನೊಡನೆ ಕಾಂಗ್ರೆಸ್ ಸೇರಿ

ಕೆ.ಆರ್‌. ನಗರ: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲಿರುವ ನನ್ನ ಜೊತೆ ಬೆಂಬಲಿಗರು ಮತ್ತು ಹಿತೈಷಿಗಳು ಮುಕ್ತವಾಗಿ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಮೇ 10ರಂದು ಸೋಮವಾರ ಬೆಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದರು.

ನಾನು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದಾಗ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ಜನ ವಿರೋಧಿ ಆಡಳಿತದಿಂದ ಬೇಸತ್ತು ಬಿಜೆಪಿಗೆ ಹೋಗಿದ್ದಾಗಿ ಹೇಳಿರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದ ನಂತರ ಅವರು ಬಡವರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡಿ ಅಭಿವೃದ್ಧಿಯ ಪರ್ವವನ್ನೇ ಹರಿಸುತ್ತಾರೆ ಎಂಬ ಭರವಸೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಸೇರಿದಂತೆ ಇತರರು ಬೆಂಬಲ ನೀಡಿದ್ದೆವು. ಆದರೆ ಅವರು ದುರಾಡಳಿತದಲ್ಲಿ ತೊಡಗಿದ್ದು ಇದನ್ನು ಸಹಿಸದ ನಾನು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ತೀರ್ಮಾನ ಮಾಡಿದ್ದೇನೆ ಎಂದರು.

ಕ್ಷೇತ್ರದಲ್ಲಿನ ಎಲ್ಲಾ ಜಾತಿ ಜನಾಂಗದ ನನ್ನ ಬೆಂಬಲಿಗರು ಮತ್ತು ಹಿತೈಷಿಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಬೇಕು. ಈ ವಿಚಾರದಲ್ಲಿ ನಾನು ಯಾರನ್ನು ಬಲವಂತ ಮಾಡುವುದಿಲ್ಲ. ನನ್ನೊಂದಿಗೆ ರಾಜಕೀಯ ಹೆಜ್ಜೆ ಹಾಕಲು ಆಸೆ ಮತ್ತು ಆಸಕ್ತಿ ಇರುವವರು ಬನ್ನಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ತಮ್ಮನಾಯಕ, ನರಸಿಂಹರಾಜು, ಸದಸ್ಯ ಕೆ.ಪಿ. ಪ್ರಭುಶಂಕರ್‌, ಮಾಜಿ ಸದಸ್ಯರಾದ ಪೆರಿಸ್ವಾಮಿ, ಕೆ.ಬಿ. ಸುಬ್ರಮಣ್ಯ, ಗುರುಶಂಕರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ನಾಗರಾಜು, ಮಾಜಿ ನಿರ್ದೇಶಕ ಹೆಬ್ಬಾಳು ಶೇಖರ್‌, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷರಾದ ಹಂಪಾಪುರ ಸುಬ್ಬುಕೃಷ್ಣ, ಬಿ.ಎಲ…. ರಾಜಶೇಖರ, ಮುಖಂಡರಾದ ಅಡಗೂರು ನಟರಾಜು, ಜ್ಞಾನಾನಂದ, ಗಂಧನಹಳ್ಳಿ ದೇವರಾಜು, ಎ.ಟಿ. ಶಿವಣ್ಣ, ದೊಡ್ಡಕೊಪ್ಪಲು ರಾಜೇಗೌಡ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios