Asianet Suvarna News Asianet Suvarna News

ಮೂಡಿಗೆರೆ: ಕಾಂಗ್ರೆಸ್‌ನಿಂದ ಅಮೃತ ಮಹೋತ್ಸವ ಯಾತ್ರೆ, ಟಿಕೆಟ್ ಆಕಾಂಕ್ಷಿಗಳ ಪೈಪೋಟಿ

ಅಮೃತ ಮಹೋತ್ಸವದ ಕಾಂಗ್ರೆಸ್  ಪಾದಯಾತ್ರೆ ಮೂಡಿಗೆರೆಗೆ ಬಂದಿದ್ದು, ಪಾದಯಾತ್ರೆಯಲ್ಲಿ  ವಿಧಾಸನಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಜೋರಾಗಿತ್ತು.

Congress Amrit mahotsav padyatra In mudigere rbj
Author
First Published Aug 27, 2022, 8:18 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು


ಚಿಕ್ಕಮಗಳೂರು, (ಆಗಸ್ಟ್.27) :  
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರೈಸಿದೆ ಹಿನ್ನೆಲೆ ಕಾಂಗ್ರೆಸ್ ನಡೆಸುತ್ತಿರೋ ಅಮೃತ ಮಹೋತ್ಸವದ ಪಾದಯಾತ್ರೆ ಇಂದು(ಶನಿವಾರ) ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿತ್ತು. ಕಾಂಗ್ರೆಸ್ ನಾಯಕರೊಂದಿಗೆ ಕಾರ್ಯಕರ್ತರು ಮೂಡಿಗೆರೆ ತಾಲೂಕಿನಲ್ಲಿ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯಲ್ಲಿ ಮುಂಬರೋ ವಿಧಾಸನಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಪೋಟಿಯೂ ನಡೆಯಿತು. 

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ
ಅಮೃತ ಮಹೋತ್ಸವದ ಕಾಂಗ್ರೆಸ್‌  ಪಾದಯಾತ್ರೆ ಇಂದು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿತ್ತು. ಕಾಂಗ್ರೆಸ್ ನಾಯಕರೊಂದಿಗೆ ಕಾರ್ಯಕರ್ತರು ಮೂಡಿಗೆರೆ ತಾಲೂಕಿನಲ್ಲಿ ಪಾದಯಾತ್ರೆ ನಡೆಸಿದರು. ಹಾಂದಿಯಿಂದ ಭೂತನಕಾಡು ಮಾರ್ಗವಾಗಿ ಗುಲ್ಲನ್ಪೇಟೆಯಿಂದ ಆಲ್ದೂರಿನವರೆಗೂ ಪಾದಯಾತ್ರೆ ಕೈಗೊಂಡಿದ್ದರು. ಸುಮಾರು 12 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ಕೈ ಜೋಡಿಸಿದ್ದರು. ಪಾದಯಾತ್ರೆಯಲ್ಲಿ ಮುಂಬರೋ ವಿಧಾಸನಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಕೂಡ ಏರ್ಪಟ್ಟಿತ್ತು.

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಬಾರಿ ಅತ್ತ ಮಾಜಿ ಸಚಿವೆ ಮೋಟಮ್ಮ ಪುತ್ರ ನಯನಾ ಮೋಟಮ್ಮ ಕೂಡ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರಿನಾಗರತ್ನ ಕೂಡ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಇಬ್ಬರೂ ನಾಯಕಿಯರು ತಮ್ಮ ಬೆಂಬಲದೊಂದಿಗೆ ಪ್ರತ್ಯೇಕವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರೂ ನಾಯಕಿಯರ ಬೆಂಬಲಿಗರು ಕೂಡ ಪಾದಯಾತ್ರೆಯುದ್ಧಕ್ಕೂ ಕಾಂಗ್ರೆಸ್ ಹಾಗೂ ತಮ್ಮ ನಾಯಕಿಯರಿಗೆ ಜೈಕಾರ ಕೂಗಿದರು. 

ಬಿಜೆಪಿ ವಿರುದ್ದ ಕಿಡಿ  
ಪಾದಯಾತ್ರೆ ನಂತರ ಆಲ್ದೂರು ಪಟ್ಟಣದ ನಾರಾಯಣಗುರು ಸಮುದಾಯಭವನದಲ್ಲಿ ನಡೆದ  ಸಮಾರೋಪ ಸಮಾರಂಭದಲ್ಲಿ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಮಾತನಾಡಿ, ಬಿಜೆಪಿ ದೇಶವನ್ನು ಉತ್ತರ ಭಾರತ,ದಕ್ಷಿಣ ಭಾರತ ಎಂದು ವಿಭಜನೆ ಮಾಡಲು ಹೊರಟ್ಟಿದ್ದು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೂಗೆಯಬೇಕು ಎಂದರು.

ಬಿಜೆಪಿ  ದೇಶವನ್ನು ಉತ್ತರ ಭಾರತ,ಧಕ್ಷಿಣ ಭಾರತ ಎಂದು ವಿಭಜನೆ ಮಾಡಲು ಹೊರಟಿದ್ದು ಇದು ಸಾಧ್ಯವಿಲ್ಲ ,ಇಂದಿರಾಗಾಂಧಿಯವರ ರಕ್ತ ಉತ್ತರ ಭಾರತದಲ್ಲಿ ಬಿದ್ದಿದ್ದರೆ,ದಕ್ಷಿಣ ಭಾರತದಲ್ಲಿ ರಾಜೀವ್ ಗಾಂಧೀಯವರ ರಕ್ತ ಬಿದ್ದಿದ್ದು ಉತ್ತರ ಭಾರತ,ದಕ್ಷಿಣ ಭಾರತವನ್ನು ವಿಭಜನೆ ಮಾಡಲು ಸಾಧ್ಯವಿಲ್ಲ ಇದನ್ನು ಒಂದುಗೊಡಿಸುವ ಕೆಲಸವನ್ನು ಕಾಂಗ್ರೆಸ್  ಮಾಡುತ್ತಿದೆ ಹೇಳಿದರು. 

ಮಾಜಿ ಸಚಿವ ರಮಾನಾಥರೈ ಮಾತನಾಡಿ  ಗಾಂಧಿ,ನೆಹರು ಬ್ರಿಟೀಷರ ವಿರುದ್ದ ಹೊರಾಡಿ ಸ್ವಾತಂತ್ರ್ಯ ಹೇಗೆ ತಂದು ಕೊಟ್ಟರೂ ಇದೇ ರೀತಿ ಬಿಜೆಪಿಯವರ ಜೊತೆ ಹೋರಾಡಿ ನಾವು ಅಧಿಕಾರ ಮರಳಿ ಪಡೆಯಬೇಕಿದೆ  ಇಂದಿನಿಂದಲ್ಲೇ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ,ಬಿಜೆಪಿಯನ್ನು ಆಽಕಾರದಿಂದ ತೆಗೆದು ಹಾಕಲು ಶಪಥ ಮಾಡಬೇಕಿದೆ ಎಂದು ಕರೆ ನೀಡಿದರು.ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾಧ್ಯಕ್ಷ  ಡಾ. ಅಂಶುಮಂತ್, ಮಾಜಿ ಸಚಿವೆ ಮೋಟಮ್ಮ ಸೇರಿ ಹಲವು ಸ್ಥಳಿಯ ಮುಖಂಡರು ಕೂಡ ಪಾಲ್ಗೊಂಡಿದ್ದರು

Follow Us:
Download App:
  • android
  • ios