ಮಂಗಳೂರು (ನ.08):  ಬಂಟ್ವಾಳ ಪುರಸಭೆ ಗದ್ದುಗೆ ಹಿಡಿಯಲು ಎಸ್ ಡಿಪಿಐ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಿದೆ. 

ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆ ಎಸ್ ಡಿಪಿಐ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಮಡಿದ್ದು ಸಾಮಾಜಿಕ ತಾಣಗಳಲ್ಲಿ ಎಸ್ಡಿಪಿಐ-ಕಾಂಗ್ರೆಸ್ ಮೈತ್ರಿ ವಿರುದ್ದ ಬಿಜೆಪಿ ಕಿಡಿ ಕಾರಿದೆ. 

27 ಸ್ಥಾನ ಹೊಂದಿರುವ ಬಂಟ್ವಾಳ ಪುರಸಭೆ ಆಡಳಿತದಲ್ಲಿ 12 ಸ್ಥಾನ ಕಾಂಗ್ರೆಸ್ ಬಳಿ ಇದ್ದರೆ, 11 ಬಿಜೆಪಿ ಮತ್ತು 4 ಎಸ್ ಡಿಪಿಐ ಅಭ್ಯರ್ಥಿಗಳ ಗೆಲುವಾಗಿತ್ತು. 

ರಾಜಕೀಯಕ್ಕೆ ಅಂಬರೀಷ್ ಪುತ್ರ ಅಭಿಷೇಕ್‌ ಎಂಟ್ರಿ..? ...

ಬಿಜೆಪಿ ಸಂಸದ ಮತ್ತು ಶಾಸಕರ ಮತ ಸೇರಿ ಬಿಜೆಪಿಗೆ 14 ಸದಸ್ಯ ಬಲ ಇದ್ದು,  ಕೊನೆಗೆ ಎಸ್ ಡಿಪಿಐ 4 ಸದಸ್ಯ ಬಲ ಪಡೆದು ಕಾಂಗ್ರೆಸ್ ಗೆ 16 ಸದಸ್ಯ ಬಲ ಹೊಂದಿತು.

ಎಸ್ ಡಿಪಿಐ ಮೈತ್ರಿಯೊಂದಿಗೆ ಬಂಟ್ವಾಳ ಪುರಸಭೆ ಆಡಳಿತ  ಕಾಂಗ್ರೆಸ್ ವಶಕ್ಕೆ ಸಿಕ್ಕಿದ್ದು, ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಎಸ್ ಡಿಪಿಐ ಜೊತೆ ಮೈತ್ರಿಕೊಳ್ಳಲಾಗಿತ್ತು. 

ಎಸ್ ಡಿಪಿಐ ಜೊತೆಗಿನ ಮೈತ್ರಿ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಿಡಿಕಾರಿದ್ದು, ಕಾಂಗ್ರೆಸ್ ಎಸ್ ಡಿಪಿಐಗೆ ವಿರೋಧ ಅಂತ ಹೇಳುತ್ತಲೇ ಮೈತ್ರಿ ಮಾಡಿದ್ದಾರೆ.  ಕಾಂಗ್ರೆಸ್-ಎಸ್ ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಇವರು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.