ಮೂಡಬಿದಿರೆ(ಡಿ. 20) ಕಡಂದಲೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮತ್ತೆ ಪಂಕ್ತಿಬೇಧದ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರೋಪ ಕೇಳಿಬಂದಿದೆ.

ದೇವಸ್ಥಾನದ ಪೂಜೆ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಅವರು ಊಟ ಮಾಡಿದ ನಂತರ ಉಳಿದ ಜಾತಿಯವರಿಗೆ ಊಟ ಹಾಕಲಾಗಿದ್ದು ಸಹಪಂಕ್ತಿ ಭೋಜನ ವ್ಯವಸ್ಥೆ ಬದಲು ಜಾತಿ ಆಧಾರದಲ್ಲಿ ಭೋಜನ ನೀಡಿದ್ದಾರೆ ಎಂಬ ಆರೋಪ ಬಂದಿದೆ.

ಮೈಲಾರಲಿಂಗೇಶ್ವವರನಿಗೆ ಡಿಕೆಶಿ ಹೆಲಿಕಾಪ್ಟರ್ ಕೊಟ್ಟಿದ್ದು ಯಾಕೆ?

ದೇವಸ್ಥಾನದ ಅರ್ಚಕರ ನಡೆಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ದಲಿತೆ ಎಂಬ ಕಾರಣಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅವಮಾನ ಮಾಡಿದ್ದ ಪ್ರಕರಣವೂ ನಡೆದಿತ್ತು. 

ದೇವಸ್ಥಾನದ ಒಳಾಂಗಣದಿಂದ ಪೊಲೀಸ್ ಸಿಬ್ಬಂದಿ ಅರ್ಚಕರು ಹೊರಗೆ ಕಳಿಸಿದ್ದರು ಕಳೆದ ಹಲವು ವರ್ಷಗಳಿಂದ ದೇವಸ್ಥಾನದಲ್ಲಿ ಪಂಕ್ತಿಬೇಧ ಆಚರಣೆ ನಡೆಯುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ತಿಳಿಗೊಳಿಸಿದ್ದಾರೆ.