ಮೈಲಾರಲಿಂಗೇಶ್ವರನಿಗೆ ಹೆಲಿಕಾಪ್ಟರ್‌ ಅನ್ನೇ ಕೊಟ್ಟಿದ್ಯಾಕೆ? ಇಲ್ಲಿದೆ ಡಿಕೆಶಿ ಕಾಣಿಕೆ ರಹಸ್ಯ

First Published Dec 18, 2020, 9:41 PM IST

ಹರಕೆ ಹೊತ್ತು ದೇವರ ಕಾರ್ಯವನ್ನು ಮಾಡುತ್ತಾರೆ. ಈ ರೀತಿ ಮಾಡಿದರೆ ಯಶಸ್ಸು ಸಿಗುತ್ತದೆ. ಕಾರ್ಯ ಸಿದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಇನ್ನು ದೇವರೇ, ನನಗೆ ಇಂತಹ ಅನುಕೂಲ ಆದಲ್ಲಿ ಇಂಥ ಸೇವೆಯೊಂದನ್ನು ಮಾಡಿಸುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಮತ್ತು ಕೆಲವರು ಮುಡಿಪು ಕಟ್ಟಿಕೊಳ್ಳುತ್ತಾರೆ. ಆದ್ರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಾಯಶ್ಚಿತ್ತಕ್ಕಾಗಿ ದೇವರಿಗೆ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ನೀಡಿದ್ದಾರೆ. ಅಷ್ಟಕ್ಕೂ ಡಿಕೆಶಿ ದೇವರಿಗೆ ಹೆಲಿಕಾಪ್ಟರ್ ಕಾಣಿಕೆ ನೀಡಿದ್ಯಾಕೆ? ಎನ್ನುವ ಮಾಹಿತಿ ಫೋಟೋಗಳಲ್ಲಿ ನೋಡಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು (ಶುಕ್ರವಾರ) ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿದ ವಿಶೇಷ ಪೂಜೆ ಸಲ್ಲಿಸಿದರು.

dk sivakumar silver helicopter

dk sivakumar silver helicopter

ಶಾಪ ವಿಮೋಚನೆಗಾಗಿ ದೇವಸ್ಥಾನಕ್ಕೆ ಬಂದು ಜಲಸ್ನಾನ ಸೇವೆ ಮಾಡಿಸಿಕೊಂಡರು.

ಅಲ್ಲದೇ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹರಕೆ ತೀರಿಸಿದರು.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಆಕಾಶದಲ್ಲಿ ಮೂರು ವರ್ಷಗಳ ಹಿಂದೆ ಡಿ ಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ನಲ್ಲಿ ಹಾದುಹೋಗಿದ್ದರು. ಇದರಿಂದಾಗಿ ಅವರು ಕ್ಷೇತ್ರಕ್ಕೆ ಅಪಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು.

ನಂತರ ಅವರಿಗೆ ಸಾಲು-ಸಾಲು ಸಂಕಷ್ಟಗಳೇ ಎದುರಾದವು. ಅವರ ಮೇಲೆ ಎರಡ್ಮೂರು ಬಾರಿ ಐಟಿ ದಾಳಿ, ತಿಹಾರ್ ಜೈಲಿ ಹೋಗಿದ್ದರು.

ಹಿನ್ನೆಲೆಯಲ್ಲಿ ದೇವಾಲಯದ ಗುರುಗಳ ಸಲಹೆ ಮೇರೆಗೆ ಡಿ.ಕೆ.ಶಿವಕುಮಾರ್ ಅವರು ಇಂದು (ಶುಕ್ರವಾರ) ದೇವಸ್ಥಾನಕ್ಕೆ ಬೆಳ್ಳಿ ಹೆಲಿಕಾಪ್ಟರ್ ನೀಡಿ ಶಾಪ ವಿಮೋಚನೆ ಮಾಡಿಕೊಂಡರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?