ಚಿಕ್ಕಬಳ್ಳಾಪುರ, ]ಡಿ.23]; ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ‌ನಗರದಲ್ಲಿ ಇಂದು [ಭಾನುವಾರ] ಸಂಜೆ ಯುವಕರ ನಡುವೆ ಸಿನಿಮೀಯ ಮಾರಾಮಾರಿ ನಡೆದಿದೆ.

ಹಣದ ವ್ಯವಹಾರದ ಸಲುವಾಗಿ ಚಿಂತಾಮಣಿ- ಬೆಂಗಳೂರು ರಸ್ತೆಯ‌ ಸ್ಟೇಡಿಯಂ ಬಳಿ ಸಿನಿಮೀಯ ರೀತಿಯ ಫೈಟಿಂಗ್ ಕಂಡು ಸ್ಥಳೀಯರು ಪ್ರೇಕ್ಷಕರಾಗಿದ್ದಾರೆ.

ಗಲಾಟೆಯಲ್ಲಿ ಯುವಕನಿಗೆ ಚಾಕುವಿನಿಂದ ‌ಇರಿದಿದ್ದು, ಆ ಯುವಕ ರಕ್ತದ ಮಡುವಿನಲ್ಲಿ ಬಿದ್ದರೂ ಸ್ಥಳೀಯರು ಸಹಾಯಕ್ಕೆ ಹೋಗದೇ ವಿಡಿಯೋ ಮಾಡುವುದರಲ್ಲಿಯೇ ತಲ್ಲೀನರಾಗಿದ್ದಿರುವುದು ಮಾತ್ರ ವಿಪರ್ಯಾಸವೇ ಸರಿ. 

ಸುನೀಲ್, ಮಹೇಶ್ ಗಾಯಾಗೊಂಡಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಚಾಕು ಹಾಕಿದ ಮಹೇಶ್ ಎನ್ನುವಾತನನ್ನು  ಚಿಂತಾಮಣಿ‌ ನಗರ ಪೊಲೀಸರ ವಶಕ್ಕೆ ಪಡೆದುಕೊಮಡು ವಿಚಾರಣೆ ನಡೆಸಿದ್ದಾರೆ.