ಉಚಿತ ಪ್ರಯಾಣಕ್ಕೆ ಒರಿಜಿನಲ್‌ ಆಧಾರ್‌ ತೋರಿಸದ ಮಹಿಳೆಯರನ್ನ ಬಸ್ಸಿಂದ ಇಳಿಸಿದ ಕಂಡಕ್ಟರ್‌

ಬಸ್ಸನ್ನು ಜಾಲಹಳ್ಳಿ ಕ್ರಾಸ್‌ನಲ್ಲಿ ಏರಿದ್ದ ಕೆಲವು ಮಹಿಳೆಯರು ಗುರುತಿನ ಚೀಟಿಯಾಗಿ ಆಧಾರ್‌ ಜೆರಾಕ್ಸ್‌ ತೋರಿಸಿದ್ದಾರೆ. ಇದನ್ನು ಒಪ್ಪದ ಕಂಡಕ್ಟರ್‌, ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದ್ದಾನೆ. ಅವರನ್ನು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿಸಿದ್ದಾನೆ. 

Conductor Dropped the Women from the Bus who did not show Original Aadhaar for Free Travel grg

ದಾಸರಹಳ್ಳಿ(ಜೂ.14):  ಶಕ್ತಿ ಯೋಜನೆಯಡಿ ರಾಜ್ಯದ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದ್ದರೂ, ಗುರುತಿನ ಚೀಟಿಯಾಗಿ ಜೆರಾಕ್ಸ್‌ ಪ್ರತಿ ತೋರಿಸಿದ್ದಕ್ಕೆ ಆ ಮಹಿಳೆಯರನ್ನು ಬಸ್‌ನಿಂದ ಕೆಳಗೆ ಇಳಿಸಿದ ಘಟನೆ ಬೆಂಗಳೂರಿನಲ್ಲೇ ನಡೆದಿದೆ. ಅಲ್ಲದೆ ಮತ್ತೊಬ್ಬ ಮಹಿಳೆಗೆ ಕಂಡಕ್ಟರ್‌ 5 ಟಿಕೆಟ್‌ ನೀಡಿದ್ದಾನೆ.

ನೇತ್ರಾವತಿ ಎಂಬುವವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯಿಂದ ಬಾಗಲಗುಂಟೆಗೆ ಪ್ರಯಾಣಿಸಬೇಕಿತ್ತು. ಅವರು ಮೆಜೆಸ್ಟಿಕ್‌ನಿಂದ ಹೆಸರುಘಟ್ಟಕ್ಕೆ ತೆರಳುತ್ತಿದ್ದ ಬಿಎಂಟಿಸಿ ಡಿಪೋ-22 (ಪೀಣ್ಯ)ರ (ಕೆಎ01 ಎಫ್‌ಎ 2079) ಬಸ್ಸನ್ನು ಮಧ್ಯಾಹ್ನ ಏರಿದ್ದಾರೆ. ಅವರು ಆಧಾರ್‌ ಕಾರ್ಡ್‌ ನಕಲನ್ನು ಕಂಡಕ್ಟರ್‌ಗೆ ತೋರಿಸಿದ್ದಕ್ಕೆ ‘ಈ ಪ್ರತಿ ನಡೆಯುವುದಿಲ್ಲ, ಒರಿಜಿನಲ್‌ ತೋರಿಸಿ’ ಎಂದು ಕಂಡಕ್ಟರ್‌ ಹೇಳಿದ್ದಾನೆ. ಬಳಿಕ ಆತ ನೇತ್ರಾವತಿ ಅವರಿಂದ .5 ಪಡೆದು ಟಿಕೆಟ್‌ ಹರಿದಿದ್ದಾನೆ.

Shakti scheme: 2ನೇ ದಿನ 41 ಲಕ್ಷ ಸ್ತ್ರೀಯರ ಉಚಿತ ಬಸ್‌ ಯಾನ

ಮಹಿಳೆಯರನ್ನು ಕೆಳಗಿಳಿಸಿದ:

ಅದೇ ಬಸ್ಸನ್ನು ಜಾಲಹಳ್ಳಿ ಕ್ರಾಸ್‌ನಲ್ಲಿ ಏರಿದ್ದ ಕೆಲವು ಮಹಿಳೆಯರು ಗುರುತಿನ ಚೀಟಿಯಾಗಿ ಆಧಾರ್‌ ಜೆರಾಕ್ಸ್‌ ತೋರಿಸಿದ್ದಾರೆ. ಇದನ್ನು ಒಪ್ಪದ ಕಂಡಕ್ಟರ್‌, ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದ್ದಾನೆ. ಅವರನ್ನು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿಸಿದ್ದಾನೆ. ಈ ವೇಳೆ ಕೆಲವು ಮಹಿಳೆಯರು ನಿರ್ವಾಹಕನ ವಿರುದ್ಧ ಹರಿಹಾಯ್ದರು. ನಿರ್ವಾಹಕನ ವರ್ತನೆಗೆ ಸಹ ಪ್ರಯಾಣಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದರು.
 

Latest Videos
Follow Us:
Download App:
  • android
  • ios