Asianet Suvarna News Asianet Suvarna News

Shakti scheme: 2ನೇ ದಿನ 41 ಲಕ್ಷ ಸ್ತ್ರೀಯರ ಉಚಿತ ಬಸ್‌ ಯಾನ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆಗೆ ಎರಡನೇ ದಿನವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, 41.34 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರವು ಮಹಿಳೆಯರು ಪ್ರಯಾಣಿಸಿದ ಪ್ರಯಾಣದ ಮೊತ್ತವಾದ 8.83 ಕೋಟಿ ರು.ಗಳನ್ನು ಸಾರಿಗೆ ನಿಗಮಗಳಿಗೆ ಪಾವತಿಸಬೇಕಾಗುತ್ತದೆ.

Shakti scheme 2nd day free bus ride for 41 lakh women in karnataka rav
Author
First Published Jun 14, 2023, 5:21 AM IST

ಬೆಂಗಳೂರು (ಜೂ.14) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆಗೆ ಎರಡನೇ ದಿನವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, 41.34 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರವು ಮಹಿಳೆಯರು ಪ್ರಯಾಣಿಸಿದ ಪ್ರಯಾಣದ ಮೊತ್ತವಾದ 8.83 ಕೋಟಿ ರು.ಗಳನ್ನು ಸಾರಿಗೆ ನಿಗಮಗಳಿಗೆ ಪಾವತಿಸಬೇಕಾಗುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ 11,40,057 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು ಅದರ ಮೌಲ್ಯ 3,57,84,677 ರು.ಗಳಾಗಿವೆ. ಬಿಎಂಟಿಸಿ ಬಸ್‌ನಲ್ಲಿ 17,57,887 ಮಹಿಳೆಯರು ಪ್ರಯಾಣಿಸಿದ್ದು ಪ್ರಯಾಣದ ಮೌಲ್ಯ 1,75,33,234 ರು.ಗಳಾಗಿವೆ. ವಾಯವ್ಯ ಸಾರಿಗೆ ಬಸ್‌ಗಳಲ್ಲಿ 8,31,840 ಮಹಿಳೆಯರು ಪ್ರಯಾಣ ಮಾಡಿದ್ದು ಪ್ರಯಾಣದ ಮೌಲ್ಯ 2,10,66,638 ರು.ಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳಲ್ಲಿ 4,04,942 ಮಹಿಳೆಯರು ಪ್ರಯಾಣಿಸಿದ್ದು ಪ್ರಯಾಣದ ಮೌಲ್ಯ 1,39,68,885 ರು.ಗಳಾಗಿವೆ. ಒಟ್ಟು 41,34,726 ಮಹಿಳೆಯರು ಪ್ರಯಾಣಿಸಿದ್ದು ಪ್ರಯಾಣದ ಮೌಲ್ಯ 8,83,53,434 ರು.ಗಳೆಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕರೆಂಟ್ ಕದನ: ದರ ಏರಿಸಿದ್ದು ನಾವಲ್ಲ -ಬೊಮ್ಮಾಯಿ, ಬಿಜೆಪಿ ಏರಿಕೆ ಮಾಡಿದ್ದಕ್ಕೆ ದಾಖಲೆ ಇದೆ - ಸರ್ಕಾರ!

ವೋಲ್ವೋ ಬಸ್‌ಗೆ ಪ್ರಯಾಣಿಕರೇ ಇಲ್ಲ:

ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಯಲಂಹಕ, ಎಲೆಕ್ಟ್ರಾನಿಕ್‌ಸಿಟಿ, ವೈಟ್‌ಫೀಲ್ಡ್‌, ಐಟಿಪಿಎಲ್‌, ಬನ್ನೇರುಘಟ್ಟ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಮತ್ತಿತರ ಕಡೆಗಳಿಗೆ ಸಂಚರಿಸುವ ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಕ ಸಂಖ್ಯೆ ಇಳಿಕೆಯಾಗಿದೆ. ಕೆಲವೇ ಮಂದಿ ಪುರುಷರು ಮತ್ತು ಬೆರಳೆಣಿಕೆಯಷ್ಟುಮಹಿಳೆಯರು ಸಂಚರಿಸುತ್ತಿರುವ ದೃಶ್ಯ ಕಂಡು ಬಂತು. ಬಿಎಂಟಿಸಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ವೋಲ್ವೋ ಬಸ್‌ಗಳಿಗೆ ಎರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಶೇ.5ರಷ್ಟುಇಳಿಕೆಯಾಗಿದೆ.

ಮಹಿಳೆಯರೇ ..ರೂಲ್ಸ್‌ ನೋಡಿ ..ಬಸ್‌ ಹತ್ತಿ, 6 ರಿಂದ 12 ವರ್ಷದೊಳಗಿನ ಬಾಲಕಿಯರಿಗೂ ಉಚಿತ

Follow Us:
Download App:
  • android
  • ios