Asianet Suvarna News Asianet Suvarna News

ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಮಾಡಿದ್ದ ನೇತ್ರಾವತಿ ಸೇತುವೆಗೆ ತಡೆಬೇಲಿ

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್‌ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ನೇತ್ರಾವತಿ ಸೇತುವೆಯಿಂದ ಇನ್ಮುಂದೆ ನದಿಗೆ ಹಾರಿ ಯಾರೂ ಆತ್ಮಹತ್ಯೆ ಮಾಡಬಾರದು ಎಂಬ ಉದ್ದೇಶ ಸರ್ಕಾರದ್ದು. ಅದಕ್ಕಾಗಿ ಸೇತುವೆಯ ಬದಿಗಳಲ್ಲಿ ತಂತಿ ಬೇಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.

Compound wall toNetrvathi bridge in Mangalore
Author
Bangalore, First Published Jul 7, 2020, 7:35 AM IST

ಮಂಗಳೂರು(ಜು.07): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾಥ್‌ರ್‍ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ನೇತ್ರಾವತಿ ಸೇತುವೆಯಿಂದ ಇನ್ಮುಂದೆ ನದಿಗೆ ಹಾರಿ ಯಾರೂ ಆತ್ಮಹತ್ಯೆ ಮಾಡಬಾರದು ಎಂಬ ಉದ್ದೇಶ ಸರ್ಕಾರದ್ದು. ಅದಕ್ಕಾಗಿ ಸೇತುವೆಯ ಬದಿಗಳಲ್ಲಿ ತಂತಿ ಬೇಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.

ಕಳೆದ 10 ವರ್ಷಗಳಲ್ಲಿ 30ಕ್ಕೂ ಅಧಿಕ ಮಂದಿ ಈ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ವರ್ಷ ಕಾಫಿ ಡೇ ಸಿದ್ಧಾಥ್‌ರ್‍ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಸೇತುವೆಯೂ ಮತ್ತೆ ಸುದ್ದಿ ಮಾಡಿತ್ತು. ಅದರ ಬಳಿಕವೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಕೊನೆಗೂ ಸೇತುವೆ ಮೇಲಿನಿಂದ ಹಾರಲು ಸಾಧ್ಯವಾಗದಂತೆ ಸೇತುವೆ ಬದಿಯ ತಡೆಗೋಡೆಗಳಿಗೆ ಸುಮಾರು 1 ಮೀ. ಎತ್ತರದ ತಂತಿಬೇಲಿ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆ

ಈ ಸೇತುವೆ ಸುಮಾರು 800 ಮೀ. ಉದ್ದವಿದ್ದು, ಎರಡು ಸೇತುವೆಗಳ ನಾಲ್ಕೂ ತಡೆಗೋಡೆಗಳಿಗೆ (3.2 ಕಿ.ಮೀ.) ತಂತಿಬೇಲಿ ಅಳವಡಿಸುವ ಯೋಜನೆ ಇದು. ಮೂಡಾದಿಂದ 55 ಲಕ್ಷ ರು. ವೆಚ್ಚದಲ್ಲಿ ತಡೆಬೇಲಿ ನಿರ್ಮಾಣವಾಗಲಿದ್ದು, ಎರಡು ತಿಂಗಳೊಳಗೆ ಸಂಪೂರ್ಣವಾಗುವ ನಿರೀಕ್ಷೆಯಿದೆ. ಜತೆಗೆ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗುವದು.

ಕಣ್ಮರೆಯಾದ ಕಾಫಿ ಕನ್ನಡಿಗ ಸಿದ್ಧಾರ್ಥ, ಒಂದು ಚಿತ್ರ ಯಾತ್ರೆ

ತಡೆಬೇಲಿಗೆ ಶಾಸಕ ವೇದವ್ಯಾಸ ಕಾಮತ್‌ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೇಯರ್‌ ದಿವಾಕರ್‌ ಪಾಂಡೇಶ್ವರ, ಕಾರ್ಪೊರೇಟರ್‌ ವೀಣಾ ಮಂಗಳ ಮತ್ತಿತರರು ಇದ್ದರು.

Follow Us:
Download App:
  • android
  • ios