Asianet Suvarna News Asianet Suvarna News

ಕೊಪ್ಪಳ: ಕೊಲೆ ಪ್ರಕ​ರಣ ಭೇದಿಸುವ ನೆಪ​ದಲ್ಲಿ ಅಮಾ​ಯ​ಕ​ರಿಗೆ ಥಳಿ​ತ?

ಆರೋಪಿಗಳನ್ನು ಪತ್ತೆ ಮಾಡುವ ನೆಪದಲ್ಲಿ ಕಾರಟಗಿ ಪಿಎಸ್‌ಐ ಅವಿನಾಶ ಕಾಂಬ್ಳೆ ಅವರಿಂದ ವಿನಾಕಾರಣ ಹಲ್ಲೆ| ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು| ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಅ. 17ರಂದು ನಡೆದ ಕೊಲೆ ಪ್ರಕರಣ| 

Complaint to Police for Assault in Koppal District grg
Author
Bengaluru, First Published Oct 25, 2020, 10:13 AM IST

ಕೊಪ್ಪಳ(ಅ.25): ಕಾರಟಗಿಯಲ್ಲಿ ಅ. 17ರಂದು ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ನೆಪದಲ್ಲಿ ಕಾರಟಗಿ ಪಿಎಸ್‌ಐ ಅವಿನಾಶ ಕಾಂಬ್ಳೆ ತಮ್ಮ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಧಾರವಾಡ ಮೂಲದ ಇಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಧಾರವಾಡ ಜಿಲ್ಲೆಯ ಮಾದಾರಮಡ್ಡಿ ಮೂಲದ ಗ್ಲಾಸ್‌ ಸ್ಟೀಮ್‌ ಜೋಡಿಸುವ ಕಾರ್ಮಿಕರಾದ ಸುಹೇಬ್‌ ಕರಡಿಗುಡ್ಡ ಮತ್ತು ಮೊಹ್ಮದ್‌ ಜಮೀಲ್‌ ಅವರೇ ಈ ರೀತಿ ದೂರು ನೀಡಿರುವವರು. ಗ್ಲಾಸ್‌ ಸ್ಟೀಮ್‌ ಜೋಡಿಸುವ ಕಾರ್ಮಿಕರಾದ ನಾವು ಕೆಲಸದ ನಿಮಿತ್ತ ಧಾರವಾಡದಿಂದ ಗಂಗಾವತಿಗೆ ಬಂದಿದ್ದು, ಲಾಜ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದೇವು. ಕಾರಟಗಿ ಪಿಎಸ್‌ಐ ಅವಿನಾಶ ಕಾಂಬ್ಳೆ ಅವರು ರಾತ್ರೋ ರಾತ್ರಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ. ವಿನಾಕಾರಣ ನಮ್ಮ ಮೇಲೆ ಸಂಶಯಿಸಿದ್ದಾರೆ. 

ಸಿದ್ದರಾಮಯ್ಯ ಕಾಂಗ್ರೆಸ್‌ ಅಂದರೆ ತಾನೇ ಅಂತ ತಿಳಿದುಕೊಂಡಂತಿದೆ: ಕಾಂಗ್ರೆಸ್‌ ನಾಯಕ

ಕಾರ್ಯ ನಿಮಿತ್ತ ಇಲ್ಲಿಗೆ ಬಂದಿದ್ದಾಗಿ ಹೇಳಿದರೂ ಕೇಳದೇ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಅವರು ಎಸ್ಪಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಗೆ ಬರಬೇಕಾಗಿದೆ.
 

Follow Us:
Download App:
  • android
  • ios