ವಿಜಯಪುರ(ಆ.28): ಪೊಲೀಸ್ ಠಾಣೆಗೆ ದೂರು ನೀಡಲು ಬಂದವರಿಂದ ಹಣ ಪೀಕುವ ಧನದಾಹಿ ಪೇದೆ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯಪುರ ‌ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಪರಶುರಾಮ್ ಕಟಬರ್, ದೂರು ನೀಡಲು ಬಂದ ಸಾವರ್ವಜನಿಕರಿಂದ ಲಂಚ ಪಡೆಯುತ್ತಾನೆ ಎಂಬ ಅರೋಪ ಕೇಳಿ ಬಂದಿದೆ.
 
ಪರುಶರಾಮ್ ಸಾರ್ವಜನಿಕರಿಂದ ಲಂಚ ಪಡೆಯುತ್ತಿರುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಪರುಶರಾಮ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.