ಕಲಬುರಗಿ(ಮೇ.17): ಜಿಲ್ಲೆಯ ವಾಡಿ ಸೀಲ್‌ಡೌನ್‌ ಪ್ರದೇಶದಲ್ಲಿ ಬ್ಯಾರಿಕೇಡ್‌ ತೆರವುಗೊಳಿಸಿ ಸೋಂಕು ಮುಕ್ತ ಪ್ರದೇಶವೆಂದು ಘೋಷಿಸಲು ಹೋಗಿದ್ದ ಸಂದರ್ಭದಲ್ಲಿ ಸಂಸದ ಡಾ.ಉಮೇಶ ಜಾಧವ್‌ ಜೊತೆ ವಾಗ್ವಾದಕ್ಕಿಳಿದು ಘೇರಾವ್‌ ಹಾಕಿದ್ದ ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಂಸದ ಉಮೇಶ ಜಾಧವ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂಬ ದೂರಿನಡಿಯಲ್ಲಿ ಪುರಸಭೆ ಸದಸ್ಯ ಶರಣು ನಾಟೀಕಾರ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಮೆಹಬೂಬ್‌ ಸಾಹೇಬ್‌ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

'ನಮ್ಮನ್ನ ಬಿಟ್ಬಿಡಿ, ಕ್ವಾರಂಟೈನ್‌ ಮಾಡಿದ್ರೆ ಆತ್ಮಹತ್ಯೆ ಮಾಡ್ಕೊಳ್ತೇವೆ'

ಜಿಪಂ ಕಲಬುರಗಿ ಸದಸ್ಯ ಅರವಿಂದ ಚವ್ಹಾಣ್‌ ನೀಡಿದ ದರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 10 ರಂದು ವಾಡಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿತ್ತು. ಕಾಂಗ್ರೆಸ್‌ ಮುಖಂಡರು ಘೇರಾವ್‌ ಹಾಕಿ ಜಾಧವ್‌ ವಿರುದ್ಧ ಘೋಷಣೆ ಸಹ ಕೂಗಿದ್ದರು.